ಕರ್ನಾಟಕ

karnataka

ETV Bharat / state

ಸರ್ಕಾರಿ ಜಾಗ ಒತ್ತುವರಿ ಆರೋಪ... ಮನೆ ನಿರ್ಮಾಣಕ್ಕೆ ತಹಶೀಲ್ದಾರ್​ ರಿಂದ ಬ್ರೇಕ್​

ಕೋಮಲ ಹೆಸರಿಗೆ ನಾಯಂದ್ರಹಳ್ಳಿಯಲ್ಲಿ ಮನೆ ಕಟ್ಟಲು ಸರ್ಕಾರದಿಂದ ಹಣ ಬಿಡುಗಡೆ ಮಾಡಲಾಗಿತ್ತು. ಆದ್ರೆ ಸರ್ಕಾರಿ ಜಾಗ ಒತ್ತುವರಿ ಆರೋಪ ಕೇಳಿಬಂದಿರುವುದರಿಂದ ತಹಶೀಲ್ದಾರ್ ಮತ್ತು ಪೊಲೀಸರು ಮನೆ ನಿರ್ಮಾಣಕ್ಕೆ ಅಡ್ಡಿಪಡಿಸಿದ್ದಾರೆ.

home construction issue of Chickballapura
ಸರ್ಕಾರ ಹಣ ಕೊಟ್ರು ತಹಶೀಲ್ದಾರ್​ ಅವಕಾಶ ಕೊಡಲಿಲ್ಲ

By

Published : Mar 18, 2020, 3:03 PM IST

ಚಿಕ್ಕಬಳ್ಳಾಪುರ: ಸರ್ಕಾರದಿಂದ ಮನೆ ನಿರ್ಮಾಣಕ್ಕೆ ಹಣ ಬಿಡುಗಡೆಯಾದ್ರು, ತಹಶೀಲ್ದಾರ್ ಮತ್ತು ಪೊಲೀಸರು ಅಡ್ಡಿಪಡಿಪಡಿಸಿರುವುದಕ್ಕೆ ಕಾರಣ ತಿಳಿಯದೆ ಫಲಾನುಭವಿಗಳು ಕಂಗಾಲಾಗಿರುವ ಘಟನೆ ಜಿಲ್ಲೆಯ ಚಿಂತಾಮಣಿ ತಾಲೂಕಿನ ನಾಯಂದ್ರಹಳ್ಳಿಯಲ್ಲಿ ಬೆಳಕಿಗೆ ಬಂದಿದೆ.

ಸರ್ಕಾರಿ ಜಾಗದಲ್ಲಿ ಮನೆ ಕಟ್ಟುತ್ತಿರುವ ಆರೋಪ... ನಿವಾಸ ನಿರ್ಮಾಣಕ್ಕೆ ಬ್ರೇಕ್​ ಹಾಕಿದ ತಹಶೀಲ್ದಾರ್​

ನಾರಾಯಣಸ್ವಾಮಿ ಅವರ ಪತ್ನಿ ಕೋಮಲ ಹೆಸರಿಗೆ ನಾಯಂದ್ರಹಳ್ಳಿಯಲ್ಲಿ ಮನೆ ಕಟ್ಟಲು ಸರ್ಕಾರದಿಂದ ಹಣ ಬಿಡುಗಡೆ ಮಾಡಲಾಗಿತ್ತು. ಹಾಗಾಗಿ ಹಳೆ ಮನೆಯನ್ನು ತೆರವುಗೊಳಿಸಿ ಹೊಸ ಮನೆಯನ್ನು ಕಟ್ಟಿಕೊಳ್ಳಲು ಎಲ್ಲಾ ತಯಾರಿಯನ್ನು ನಡೆಸಿಕೊಂಡು ಕಟ್ಟಡವನ್ನು ಕಟ್ಟಲು ಪ್ರಾರಂಭಿಸಿದ್ದಾರೆ.

ಸದ್ಯ ಯಾವುದೇ ಕಾರಣವನ್ನು ಹೇಳದೆ ಮನೆ ಕಟ್ಟಲು ಪೊಲೀಸರು, ತಾಲೂಕು ಆಡಳಿತದಿಂದ ಅಡ್ಡಿಪಡಿಸಲಾಗುತ್ತಿದೆ ಎಂದು ಮನೆಯ ಮಾಲೀಕ ನಾರಾಯಣಸ್ವಾಮಿ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.

ಈ ಕುರಿತು ಈಟಿವಿ ಭಾರತಕ್ಕೆ ಪ್ರತಿಕ್ರಿಯೆ ನೀಡಿರುವ ಚಿಂತಾಮಣಿ ತಹಶೀಲ್ದಾರ್ ವಿಶ್ವನಾಥ್ ಅವರು, ಸರ್ಕಾರಿ ಜಮೀನಿನಲ್ಲಿ ಮನೆ ಕಟ್ಟುತ್ತಿರುವ ಹಿನ್ನಲೆ ಸರ್ವೇ ನಂತರ ಕಟ್ಟಡ ನಿರ್ಮಾಣಕ್ಕೆ ಅನುವು ಮಾಡಿಕೊಡುವುದಾಗಿ ತಿಳಿಸಿದ್ದಾರೆ.

ABOUT THE AUTHOR

...view details