ಚಿಕ್ಕಬಳ್ಳಾಪುರ: ಕಳೆದ ರಾತ್ರಿ ಸುರಿದ ಭಾರೀ ಮಳೆಗೆ ಮನೆ ಕುಸಿದು ತಂದೆ ಮತ್ತು ಮಗ ಸಾವನ್ನಪ್ಪಿರುವ ಘಟನೆ ಚಿಂತಾಮಣಿ ತಾಲೂಕಿನ ಕೈವಾರ ಹೋಬಳಿಯ ವೈಜಕೂರು ಗ್ರಾಮದಲ್ಲಿ ನಡೆದಿದೆ.
ಚಿಂತಾಮಣಿಯಲ್ಲಿ ಭಾರೀ ಮಳೆಗೆ ಕುಸಿದು ಬಿದ್ದ ಮನೆ... ತಂದೆ-ಮಗ ಸಾವು! - Father-son death in Chintamani taluk
ಭಾರೀ ಮಳೆಗೆ ಮನೆ ಕುಸಿದು ತಂದೆ ಮತ್ತು ಮಗ ಸಾವನ್ನಪ್ಪಿರುವ ಘಟನೆ ಚಿಂತಾಮಣಿ ತಾಲೂಕಿನ ಕೈವಾರ ಹೋಬಳಿಯ ವೈಜಕೂರು ಗ್ರಾಮದಲ್ಲಿ ನಡೆದಿದೆ.
ಭಾರಿ ಮಳೆಗೆ ಕುಸಿದ ಮನೆ...ತಂದೆ-ಮಗ ದಾರುಣ ಸಾವು
ಕಳೆದೊಂದು ವಾರದಿಂದ ಸುರಿಯುತ್ತಿದ್ದ ಭಾರೀ ಮಳೆಯಿಂದಾಗಿ ಚಪ್ಪಡಿ ಕಲ್ಲುಗಳ ಮನೆ ಕುಸಿದು ಮನೆಯಲ್ಲಿದ್ದ ಪೋಸ್ಟ್ ಆಫೀಸ್ ಉದ್ಯೋಗಿ ರವಿಕುಮಾರ್ (35) ಮತ್ತು ಅವರ ಮಗ ರಾಹುಲ್ (9) ಮೃತಪಟ್ಟಿದ್ದಾರೆ. ಅವಘಡದಲ್ಲಿ ಗಂಭೀರವಾಗಿ ಗಾಯಗೊಂಡಿರುವ ತಾಯಿ ಮತ್ತು ಮಗಳನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಸ್ಥಳಕ್ಕೆ ಚಿಂತಾಮಣಿ ಗ್ರಾಮಾಂತರ ಪೋಲಿಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.