ಚಿಕ್ಕಬಳ್ಳಾಪುರ:ಹಿರೇನಾಗವಲ್ಲಿಯ ಕ್ವಾರಿಯಲ್ಲಿ ಸಂಭವಿಸಿದ ಜಿಲೆಟಿನ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿ ಬಿಜೆಪಿ ಮುಖಂಡ ಹಾಗೂ ಮತ್ತೋರ್ವನನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಜಿಲ್ಲೆಯ ಗುಡಿಬಂಡೆ ಮೂಲದ ಬಿಜೆಪಿ ಮುಖಂಡ ಹಾಗೂ ದಕ್ಷಿಣ ರೈಲ್ವೆ ಸಲಹಾ ಸಮಿತಿ ಸದಸ್ಯ ಮೊದಲ ಆರೋಪಿ ಗುಡಿಬಂಡೆ ನಾಗರಾಜ್ ಹಾಗೂ ಬಾಂಬ್ ಸ್ಫೋಟಕಕಾರ ತಮಿಳುನಾಡು ಮೂಲದ ಗಣೇಶ್ ಎಂಬುವರನ್ನು ಹೊಸೂರು ಬಳಿ ಪೊಲೀಸರು ಬಂಧಿಸಿದ್ದಾರೆ. ಪ್ರಕರಣದಲ್ಲಿ ಈವರೆಗೆ ಒಟ್ಟು ಏಳು ಜನ ಆರೋಪಿಗಳನ್ನು ಬಂಧಿಸಲಾಗಿದೆ.