ಕರ್ನಾಟಕ

karnataka

ETV Bharat / state

ಚಿಕ್ಕಬಳ್ಳಾಪುರ ಶಾಲೆಗಳ ಮೇಲೆ ಹೈವೋಲ್ಟೇಜ್ ವಿದ್ಯುತ್ ಲೈನ್.. ಪೋಷಕರಲ್ಲಿ ಆತಂಕ - power lines on Chikkaballapur schools

ಜಿಲ್ಲೆಯ ಅನೇಕ ಶಾಲೆಗಳ ಮೇಲೆ 66 ಕೆವಿ ವಿದ್ಯುತ್ ಲೈನ್​​ಗಳು ಹಾದು ಹೋಗಿದ್ದು, ಪೋಷಕರಲ್ಲಿ ಆತಂಕ ಮನೆ ಮಾಡಿದೆ..

High voltage power lines on Chikkaballapur schools
ಚಿಕ್ಕಬಳ್ಳಾಪುರ ಶಾಲೆಗಳ ಮೇಲೆ ಹೈ ವೋಲ್ಟೇಜ್ ವಿದ್ಯುತ್ ಲೈನ್

By

Published : Apr 20, 2022, 5:36 PM IST

ಚಿಕ್ಕಬಳ್ಳಾಪುರ: ಜಿಲ್ಲೆಯ ಅನೇಕ ಶಾಲೆಗಳ ಮೇಲೆ 66ಕೆವಿ ವಿದ್ಯುತ್ ಲೈನ್​ಗಳು ಹಾದು ಹೋಗಿವೆ. ಮಕ್ಕಳನ್ನು ಶಾಲೆಗೆ ಕಳುಹಿಸಲು ಪೋಷಕರು ಆತಂಕ ಪಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಚಿಕ್ಕಬಳ್ಳಾಪುರ ತಾಲೂಕಿನ 35 ಶಾಲೆಗಳು, ಬಾಗೇಪಲ್ಲಿಯ 4, ಗೌರಿಬಿದನೂರಿನ 5, ಶಿಡ್ಲಘಟ್ಟದ 22, ಚಿಂತಾಮಣಿಯ 1 ಶಾಲೆಯ ಮೇಲೆ 66 ಕೆವಿ ಹೈವೋಲ್ಟೇಜ್ ವಿದ್ಯುತ್ ಲೈನ್ ಹಾದು ಹೋಗಿದೆ.

ಚಿಕ್ಕಬಳ್ಳಾಪುರ ಬೆಸ್ಕಾಂ ಎಕ್ಸಿಕ್ಯೂಟಿವ್​ ಇಂಜಿನಿಯರ್​ಗೆ ಶಾಲೆಗಳ ಮೇಲೆ ಇರುವ ಹೈವೋಲ್ಟೇಜ್ ವೈಯರ್​ಗಳನ್ನು ತೆರುವುಗೊಳಿಸುವಂತೆ ಶಾಲೆಗಳ ಪಟ್ಟಿ ನೀಡಿ ತಿಂಗಳುಗಳು ಕಳೆದಿದ್ರೂ ಕೂಡ ಕ್ರಮಕ್ಕೆ ಮುಂದಾಗಿಲ್ಲ ಎಂದು ಡಿಡಿಪಿಐ ಜಯರಾಮರೆಡ್ಡಿ ತಮ್ಮ ಅಸಾಯಕತೆ ತೋಡಿಕೊಂಡಿದ್ದಾರೆ.

ಇನ್ನೂ ಈ ಬಗ್ಗೆ ಆತಂಕ ವ್ಯಕ್ತಪಡಿಸಿರುವ ಪೋಷಕರು, ಹೈವೋಲ್ಟೇಜ್ ವೈಯರ್​ಗಳಿಂದ ಬಿಡುಗಡೆ ಆಗುವ ರೇಡಿಯೇಷನ್​ಗಳು ಮಕ್ಕಳ ಮೆದುಳಿನ ಮೇಲೆ ಪರಿಣಾಮ ಬೀರುತ್ತದೆ. ಬುದ್ಧಿಮಾಂದ್ಯ ಆಗುವ ಸಾಧ್ಯತೆಗಳಿವೆ. ಮಕ್ಕಳ ಬೆಳವಣಿಗೆ ಕುಂಠಿತಗೊಳ್ಳುವುದರ ಜೊತೆಗೆ ಅನಾರೋಗ್ಯ ಸಂಭವಿಸಿಸುವ ಭೀತಿ ಇದೆ. ಹಾಗಾಗಿ, ಕೂಡಲೇ ವಿದ್ಯುತ್ ತಂತಿಗಳನ್ನು ಬೇರೆಡೆ ಶಿಫ್ಟ್ ಮಾಡಿ ಎಂದು ಪೋಷಕರು ಶಿಕ್ಷಣ ಇಲಾಖೆ ಮತ್ತು ಬೆಸ್ಕಾಂಗೆ ಮನವಿ ಮಾಡಿದ್ದಾರೆ.

ಇದನ್ನೂ ಓದಿ:ಲಂಚ ಪಡೆಯುವಾಗ ಎಸಿಬಿ ಬಲೆಗೆ ಬಿದ್ದ ಮಹಿಳಾ ಟ್ರಾಫಿಕ್ ಇನ್​ಸ್ಪೆಕ್ಟರ್

ಶಾಲೆಗಳಿಗೆ ಬೇಸಿಗೆ ರಜೆ ಇದ್ದು ಶಾಲೆ ಆವರಣದಲ್ಲಿರುವ ವಿದ್ಯುತ್ ಲೈನ್​​ಗಳನ್ನು ತೆರವು ಮಾಡಿಸಲು ಇದು ಒಳ್ಳೆಯ ಸಮಯ. ಬೆಸ್ಕಾಂ ಇಲಾಖೆ ಶಾಲೆಗಳ ಮೇಲೆ‌ ಹಾದು ಹೋಗಿರುವ 66Kv ಹೈವೋಲ್ಟೇಜ್ ಲೈನ್​ಗಳನ್ನು ತೆರುವುಗೊಳಿಸಿ ಮಕ್ಕಳ ವಿದ್ಯಾಭ್ಯಾಸಕ್ಕೆ ಅನುಕೂಲ ಮಾಡಿಕೊಡಬೇಕಿದೆ.

ABOUT THE AUTHOR

...view details