ಕರ್ನಾಟಕ

karnataka

ETV Bharat / state

ಚಿಕ್ಕಬಳ್ಳಾಪುರ ಜಿಲ್ಲೆ ಭಾರಿ ಮಳೆ... ಸಿಡಿಲಿಗೆ ಹೊತ್ತಿ ಉರಿದ ತೆಂಗಿನ ಮರಗಳು! - ಚಿಕ್ಕಬಳ್ಳಾಪುರ ಮಳೆ,

ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಭಾರಿ ಮಳೆಯಾಗಿದ್ದು, ಸಿಡಿಲಿಗೆ ಕೆಲ ತೆಂಗಿನ ಮರಗಳು ಹೊತ್ತಿ ಉರಿದ್ದಾವೆ.

Heavy rain, Heavy rain in Chikkaballapura, Chikkaballapura Heavy rain, Chikkaballapura Heavy rain news, ಭಾರಿ ಮಳೆ, ಚಿಕ್ಕಬಳ್ಳಾಪುರದಲ್ಲಿ ಬಾರಿ ಮಳೆ, ಚಿಕ್ಕಬಳ್ಳಾಪುರ ಮಳೆ, ಚಿಕ್ಕಬಳ್ಳಾಪುರ ಮಳೆ ಸುದ್ದಿ,
ಸಿಡಿಲಿಗೆ ಹೊತ್ತಿ ಉರಿದ ತೆಂಗಿನ ಮರಗಳು

By

Published : Apr 15, 2021, 4:27 AM IST

ಚಿಕ್ಕಬಳ್ಳಾಪುರ: ಬರದ ಬೇಗೆಯಿಂದ ಬಸವಳಿದಿದ್ದ ಧರೆಗೆ ಪ್ಲವನಾಮ ಸಂವತ್ಸರದ ಮೊದಲ ವರ್ಷಧಾರೆ ಚಿಕ್ಕಬಳ್ಳಾಪುರ ಜಿಲ್ಲೆಯಾಧ್ಯಂತ ಸುರಿದಿದೆ.

ಯುಗಾದಿಯ ವರ್ಷದ ಪ್ರಥಮ ಮಳೆ ನಕ್ಷತ್ರವಾದ ಅಶ್ವಿನಿ ನಕ್ಷತ್ರದಲ್ಲಿ ನಿನ್ನೆ ಮಧ್ಯಾಹ್ನದಿಂದ ಗುಡುಗು, ಮಿಂಚಿನೊಂದಿಗೆ ಭಾರಿ ಮಳೆ ಸುರಿದಿದ್ದು, ಸತತ ಬರದಿಂದ ತತ್ತರಿಸಿರುವ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿನ ಮಳೆಗೆ ಅನ್ನದಾತನ ಮೊಗದಲ್ಲಿ ಹರ್ಷದ ಹೊನಲು ಮೂಡಿಬಂದಿದೆ.

ಸಿಡಿಲಿಗೆ ಹೊತ್ತಿ ಉರಿದ ತೆಂಗಿನ ಮರಗಳು

ಇನ್ನೂ ಚಿಕ್ಕಬಳ್ಳಾಪುರ ತಾಲೂಕಿನ ದೊಡ್ಡಮರಳಿ ಗ್ರಾಮದ‌ ಬಳಿ ತೆಂಗಿನ ಮರಕ್ಕೆ ಸಿಡಿಲು ಬಡಿದು ಹೊತ್ತು ಉರಿದಿದೆ. ಚಿಂತಾಮಣಿ ತಾಲೂಕಿನ ವ್ಯಾಪ್ತಿಯಲ್ಲಿ ಎರಡು ತೆಂಗಿನ ಮರಗಳು ಸಿಡಿಲು ಬಡಿದು ಸುಟ್ಟು ಹೋಗಿವೆ.

ಸಾಕಷ್ಟು ಹಳ್ಳಗಳು ಮಳೆರಾಯನ‌ ಆರ್ಭಟಕ್ಕೆ ತುಂಬಿದ್ದು, ಕುಂಟೆಗಳಲ್ಲಿ‌ ನೀರು ಶೇಕರಣೆಯಾಗುತ್ತಿವೆ. ಇದರಿಂದಾಗಿ ರೈತರ ಮೊಗದಲ್ಲಿ ಸಂತತ ಮೂಡಿಬಂದಿದ್ದು, ಬಿತ್ತನೆ ಮಾಡಲು ಸಿದ್ಧರಾಗುತ್ತಿದ್ದಾರೆ.

ABOUT THE AUTHOR

...view details