ಚಿಕ್ಕಬಳ್ಳಾಪುರ: ಒಂದೆಡೆ ಮಳೆಯಿಂದ ಜನ ಸಂತಸ ವ್ಯಕ್ತಡಿಸಿದರೆ, ಇನ್ನೊಂದೆಡೆ ಮಳೆ ನೀರು ಹೋಗಲು ಸೂಕ್ತ ಚರಂಡಿ ವ್ಯವಸ್ಥೆಯಿಲ್ಲದ ಕಾರಣ ವಾಹನ ಸವಾರರು ಹರಸಾಹಸ ಪಟ್ಟಿದ್ದಾರೆ.
ಮಳೆಯಿಂದ ಕೆರೆಯಂತಾದ ಮುಖ್ಯ ರಸ್ತೆಗಳು... ವಾಹನ ಸವಾರರ ಪರದಾಟ - ಕಾರ್ ಡಿಕ್ಕಿ
ಚಿಕ್ಕಬಳ್ಳಾಪುರ ಜಿಲ್ಲೆಯ ಹಲವೆಡೆ ಭಾನುವಾರ ಸಂಜೆ ಮಳೆರಾಯ ತನ್ನ ಆರ್ಭಟವನ್ನು ತೋರಿದ್ದು ವಾಹನ ಸವಾರರು ಪರದಾಡುತ್ತಿದ್ದಾರೆ.
![ಮಳೆಯಿಂದ ಕೆರೆಯಂತಾದ ಮುಖ್ಯ ರಸ್ತೆಗಳು... ವಾಹನ ಸವಾರರ ಪರದಾಟ](https://etvbharatimages.akamaized.net/etvbharat/prod-images/768-512-4816013-thumbnail-3x2-.jpg)
ಸದ್ಯ ಜಿಲ್ಲೆಯ ಚಿಂತಾಮಣಿ ನಗರದಲ್ಲಿ ಉತ್ತಮ ಮಳೆಯಾಗಿ ಮುಖ್ಯರಸ್ತೆಗಳು ಕೆರೆಗಳಂತಾಗಿವೆ. ಶಿಡ್ಲಘಟ್ಟಕ್ಕೆ ಹೋಗುವ ಮುಖ್ಯ ರಸ್ತೆ ಸಂಜೆ ಬಿದ್ದ ಮಳೆಗೆ ಕೆರೆಕುಂಟೆಗಳಂತಾಗಿದ್ದು ವಾಹನ ಸವಾರರು, ಪಾದಚಾರಿಗಳು ಪರದಾಡುವಂತಾಗಿದೆ. ನೀರು ಹೋಗಲು ಸೂಕ್ತ ಚರಂಡಿ ವ್ಯವಸ್ಥೆ ಇಲ್ಲದೆ ರಸ್ತೆಯಲ್ಲೇ ನೀರು ನಿಂತಿದ್ದು ಕಾರೊಂದು 3 ದ್ವಿಚಕ್ರ ವಾಹನಗಳಿಗೆ ಡಿಕ್ಕಿ ಹೊಡೆದ ಘಟನೆ ಕೂಡ ನಡೆದಿದೆ.
ಇನ್ನೂ ಮಳೆ ಬಂದಾಗಲ್ಲೆಲ್ಲಾ ಈ ರಸ್ತೆ ಪರಿಸ್ಥಿತಿ ತುಂಬಾ ಹದಗೆಡುತ್ತಿದ್ದು ಸಾಕಷ್ಟು ಅಪಘಾತಗಳು ಸಂಭವಿಸಿವೆ ಎನ್ನಲಾಗಿದೆ. ಅಧಿಕಾರಿಗಳು ಮಾತ್ರ ಚರಂಡಿಗಳನ್ನು ಸ್ವಚ್ಛಗೊಳಿಸದೆ, ಕೈಕಟ್ಟಿ ಕುಳಿತಿರುವುದು ಸಾರ್ವಜನಿಕರಿಗೆ, ವಾಹನ ಸವಾರರಿಗೆ ಬೇಸರವನ್ನು ತಂದಿದೆ.