ಕರ್ನಾಟಕ

karnataka

ETV Bharat / state

ಚಿಕ್ಕಬಳ್ಳಾಪುರದಲ್ಲಿ ವರುಣನ ಅವಾಂತರಕ್ಕೆ ತತ್ತರಿಸಿದ ಜನ - kannada news

ಚಿಕ್ಕಬಳ್ಳಾಪುರ ಜಿಲ್ಲೆಯ ಹಲವೆಡೆ ಗಾಳಿಸಹಿತ ಸುರಿದಿರುವ ಮಳೆಗೆ ಹಲವೆಡೆ ಮನೆಗಳ ಶೀಟ್ ಸೇರಿದಂತೆ ಮರಗಳು ಉರಳಿ ಬಿದ್ದಿದ್ದು ಜನರು ಸಾಕಷ್ಟು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.

ಮಳೆಯ ಅವಾಂತರ

By

Published : May 27, 2019, 1:56 AM IST

Updated : May 27, 2019, 2:20 AM IST

ಚಿಕ್ಕಬಳ್ಳಾಪುರ : ಜಿಲ್ಲೆಯ ಹಲವೆಡೆ ಗಾಳಿಸಹಿತ ಮಳೆಗೆ ಹಲವೆಡೆ ಮನೆಗಳ ಶೀಟ್ ಸೇರಿದಂತೆ ಮರಗಳು ಧರೆಗುರುಳಿದ್ದು ಜನರು ಸಾಕಷ್ಟು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.

ಕಳೆದ ಎರಡು ದಿನಗಳಿಂದ ಮೋಡ ಮುಸುಕಿದ ವಾತಾವರಣ ನಿರ್ಮಾಣವಾಗಿದ್ದು, ಜಿಲ್ಲೆಯ ಹಲವೆಡೆ ಜಿಟಿ ಜಿಟಿ ಮಳೆ ಶುರುವಾಗಿದೆ. ಭಾನುವಾರ ಸುರಿದ ಗಾಳಿ ಸಹಿತ ಮಳೆಗೆ ಹಲವೆಡೆ ಅವಾಂತರ ಸೃಷ್ಠಿಯಾಗಿದೆ.

ಮಳೆಯ ಅವಾಂತರ

ಹಲವೆಡೆ ಮರಗಳು ಮತ್ತು ವಿದ್ಯುತ್ ಕಂಬಗಳು ಧರೆಗುರುಳಿವೆ. ರಾಷ್ಟ್ರೀಯ ಹೆದ್ದಾರಿಯ 234 ರಸ್ತೆಯಲ್ಲಿ ಮರಗಳು ರಸ್ತೆಗೆ ಉರುಳಿದ್ದು ಕಿಲೋ ಮೀಟರ್​​​​ಟ್ಟಲೇ ಟ್ರಾಫಿಕ್ ಜಾಮ್ ಉಂಟಾಗಿತ್ತು. ಅಲ್ಲದೆ ವಿದ್ಯುತ್​ ಕಂಬಗಳು ನೆಲಕ್ಕುರುಳಿರುವುದರಿಂದ ನಗರದಲ್ಲಿಯೂವಿದ್ಯುತ್ಇಲ್ಲದೆ ಪರದಾಡುವಂತಾಗಿತ್ತು. ಇನ್ನುಜೆಸಿಬಿ ಮೂಲಕಮರಗಳನ್ನು ತೆರವುಗೊಳಿಸಿ ಟ್ರಾಫಿಕ್ ಸಮಸ್ಯೆ ನಿಯಂತ್ರಿಸಲಾಯಿತು.

Last Updated : May 27, 2019, 2:20 AM IST

ABOUT THE AUTHOR

...view details