ಕರ್ನಾಟಕ

karnataka

ETV Bharat / state

ಕಾಂಗ್ರೆಸ್ ಮುಖಂಡರು ಜನರನ್ನು ಮುರ್ಖರನ್ನಾಗಿ ಮಾಡುತ್ತಿದ್ದಾರೆ : ಸಚಿವ ಡಾ. ಸುಧಾಕರ್ - Shiva Festival

ಮುಂದಿನ ವರ್ಷದಿಂದ ಶಿವೋತ್ಸವ ಕಾರ್ಯಕ್ರಮ ಸರ್ಕಾರಿ ಕಾರ್ಯಕ್ರಮ ಆಗಬೇಕು. ಇದರ ಕುರಿತು ಮುಖ್ಯಮಂತ್ರಿಗಳ‌ ಜೊತೆ ಮಾತುಕತೆ ನಡೆಸಲಾಗುವುದು. ಈ ಬಾರಿಯ ಶಿವೋತ್ಸವಕ್ಕೆ ರಾಜ್ಯಪಾಲರಾದ ಥಾವರ್​ ಚಂದ್ ಗೆಹ್ಲೋಟ್ ಅವರು ಚಾಲನೆ ನೀಡಲಿದ್ದಾರೆ..

ಡಾ. ಸುಧಾಕರ್
ಡಾ. ಸುಧಾಕರ್

By

Published : Feb 27, 2022, 11:50 AM IST

ಚಿಕ್ಕಬಳ್ಳಾಪುರ: ಮೇಕೆದಾಟು ಯೋಜನೆಯನ್ನ ರಾಜಕೀಯ ಉದ್ದೇಶದಿಂದ ಕಾಂಗ್ರೆಸ್ ಮುಖಂಡರು ದುರ್ಬಳಕೆ ಮಾಡಿಕೊಂಡು ಜನರನ್ನು ಮೂರ್ಖರನ್ನಾಗಿ ಮಾಡುತ್ತಿದ್ದಾರೆ. ಆದ್ರೆ, ಜನರು ಮೂರ್ಖರಲ್ಲ ಎಂದು ಆರೋಗ್ಯ ಸಚಿವ ಡಾ. ಸುಧಾಕರ್ ಕೈ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದರು.

ಚಿಕ್ಕಬಳ್ಳಾಪುರ ನಗರದ ಪತ್ರಕರ್ತರ ಭವನದಲ್ಲಿ ಮಾತನಾಡಿದ ಅವರು, ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಹಲವು ಪ್ರವಾಸಿ ತಾಣಗಳಿವೆ, ಪಂಚಗಿರಿ, ಐತಿಹಾಸಿಕ ಸ್ಥಳಗಳು, ದೇವಾಲಯ, ನದಿ ಸರೋವರಗಳಿವೆ. ಇವೆಲ್ಲವೂ ಇರುವುರಿಂದ ನಮ್ಮ ಜಿಲ್ಲೆಯನ್ನು ಒಂದು ಹಲವು ಜಗತ್ತು ಎಂದು ಕರೆಯಬಹುದು.

ಜಿಲ್ಲಾಡಳಿತದ ಅಧಿಕಾರಿಗಳು ಮಾಹಾಶಿವರಾತ್ರಿಯಂದು ನಂದಿಯಲ್ಲಿ ಶಿವೋತ್ಸವ ಮಾಡಬೇಕೆಂದು ತೀರ್ಮಾನ ಮಾಡಲಾಗಿದೆ. ನಾಡಿನ ಜನರು ಶಿವನ ಕೃಪೆಗೆ ಪಾತ್ರರಾಗಿ ಎಂದು ಕರೆ ನೀಡಿದ್ರು.

ಆರೋಗ್ಯ ಸಚಿವ ಡಾ. ಸುಧಾಕರ್ ಮಾತನಾಡಿರುವುದು..

ಮುಂದಿನ ವರ್ಷದಿಂದ ಶಿವೋತ್ಸವ ಕಾರ್ಯಕ್ರಮ ಸರ್ಕಾರಿ ಕಾರ್ಯಕ್ರಮ ಆಗಬೇಕು. ಇದರ ಕುರಿತು ಮುಖ್ಯಮಂತ್ರಿಗಳ‌ ಜೊತೆ ಮಾತುಕತೆ ನಡೆಸಲಾಗುವುದು. ಈ ಬಾರಿಯ ಶಿವೋತ್ಸವಕ್ಕೆ ರಾಜ್ಯಪಾಲರಾದ ಥಾವರ್​ ಚಂದ್ ಗೆಹ್ಲೋಟ್ ಅವರು ಚಾಲನೆ ನೀಡಲಿದ್ದಾರೆ.

ಮುಖ್ಯಮಂತ್ರಿಗಳಿಗೂ ಆಹ್ವಾನ‌ ನೀಡಲಾಗಿದೆ. ಇದರ ಜೊತೆಗೆ ಸಾಕಷ್ಟು ಸಂತ, ಗುರುಗಳನ್ನು ಕರೆಯಲಾಗಿದೆ. ಮುಖ್ಯ ಗುರುಗಳಾಗಿ ಸಿರಿಕೇರಿಯ ಮಾಹಾಸ್ವಾಮಿಗಳು‌ ಬರಲಿದ್ದಾರೆ. ಜೊತೆಗೆ ರಾತ್ರಿ ಇಡೀ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಅನ್ಯನ ಭಟ್, ರಘುದೀಕ್ಷಿತ್ ಸೇರಿದಂತೆ 25 ತಂಡಗಳು ಬರಲಿವೆ ಎಂದರು.

ಇಡೀ ನಂದಿ ಬೆಟ್ಟಕ್ಕೆ ದೀಪದ ಅಲಂಕಾರ ಮಾಡಲಾಗುವುದು. ನಂದಿ ಶಿವೋತ್ಸವಕ್ಕೆ ಸುಮಾರು 2 ಲಕ್ಷಕ್ಕೂ ಅಧಿಕ ಜನತೆ ಬರುವ ನಿರೀಕ್ಷೆ ಇದೆ. ಜೊತೆಗೆ 25 ಸಾವಿರ ಆಸನಗಳ ವ್ಯವಸ್ಥೆ ಮಾಡಲಾಗಿದೆ. ಸುಮಾರು 3 ಸಾವಿರ ಕಾರುಗಳಿಗೆ 5 ಸಾವಿರ ದ್ವಿಚಕ್ರ ವಾಹನಗಳ ನಿಲುಗಡೆಗೆ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದರು.

ABOUT THE AUTHOR

...view details