ಚಿಂತಾಮಣಿ:ವಿಧಾನಸಭಾ ಕ್ಷೇತ್ರದ ಶಾಸಕರಾದ ಜೆ.ಕೆ. ಕೃಷ್ಣಾರೆಡ್ಡಿ ಅವರು ಮೂರನೇ ಬಾರಿಗೆ ಹ್ಯಾಟ್ರಿಕ್ ಗೆಲುವು ಸಾಧಿಸಿ, ಮಂತ್ರಿ ಆಗುತ್ತಾರೆ. ಅಲ್ಲದೇ 2023 ರ ವಿಧಾನ ಸಭೆಯ ಚುನಾವಣೆಯಲ್ಲಿ ಎಚ್.ಡಿ. ಕುಮಾರಸ್ವಾಮಿ ರಾಜ್ಯದ ಸಿಎಂ ಆಗುವುದು ಖಚಿತ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ. ಇಬ್ರಾಹಿಂ ಭವಿಷ್ಯ ನುಡಿದಿದ್ದಾರೆ.
ಅವರು ಇಂದು ತಾಲೂಕಿನ ಮುರುಗಮಲ್ಲ ಹಜರತ್ ಅಮ್ಮಾಜಾನ್ ಬಾವಾಜಾನ್ ದರ್ಗಾಗೆ ಭೇಟಿ ನೀಡಿದರು. ನಂತರ ಕಡಪ ಹೈ ವೇ ರಸ್ತೆಯಲ್ಲಿರುವ ಜೆ ಕೆ ಭವನಕ್ಕೆ ಭೇಟಿ ನೀಡಿದರು. ಬಳಿಕ ಮಾತನಾಡಿದ ಅವರು, ಜೆಡಿಎಸ್ ನನಗೆ ಪಾರ್ಟಿ ಅಲ್ಲ. ಅದು ನನ್ನ ಕುಟುಂಬ. ನಾನು ಕಳೆದ ಒಂದು ವರ್ಷದಿಂದ ಏನು ಹೇಳಿದೆ, ಅದೇ ಆಗುತ್ತಿದೆ ಎಂದರು.