ಗುಡಿಬಂಡೆ :ಚಿಕ್ಕಬಳ್ಳಾಪುರ ಜಿಲ್ಲೆ ಗುಡಿಬಂಡೆ ತಾಲೂಕಿನ ಜಂಗಲಹಳ್ಳಿ ಗ್ರಾಮದಲ್ಲಿ ಚಂದ್ರಮೌಳೇಶ್ವರ ದೇವರ ಪಲ್ಲಕ್ಕಿ ಮೆರವಣಿಗೆ ವೇಳೆ ಪೂಜೆ ಸಂಬಂಧ ಎರಡು ಗುಂಪುಗಳ ನಡುವೆ ಘರ್ಷಣೆ ನಡೆದ ಘಟನೆ ನಡೆದಿದೆ.
ಚಂದ್ರಮೌಳೇಶ್ವರ ದೇವರ ಪಲ್ಲಕ್ಕಿ ಪೂಜೆ ವೇಳೆ ಗುಂಪು ಘರ್ಷಣೆ, ಚಾಕುವಿನಿಂದ ಇರಿತ - ಗುಡಿಬಂಡೆ ಚಂದ್ರಮೌಳೇಶ್ವರ ದೇವರ ಪಲ್ಲಕ್ಕಿ ಪೂಜೆ ವೇಳೆ ಗುಂಪು ಘರ್ಷಣೆ ಸುದ್ದಿ
ಪಲ್ಲಕ್ಕಿ ಪೂಜೆ ಸಂಬಂಧ ಎರಡು ಗುಂಪುಗಳ ನಡುವೆ ಮಾರಾಮಾರಿಯಾಗಿ ಚಾಕುವಿನಿಂದ ಇರಿದ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆ ಗುಡಿಬಂಡೆ ತಾಲೂಕಿನ ಜಂಗಲಹಳ್ಳಿ ಗ್ರಾಮದಲ್ಲಿ ಚಂದ್ರಮೌಳೇಶ್ವರ ದೇವರ ಪಲ್ಲಕ್ಕಿ ಮೆರವಣಿಗೆಯಲ್ಲಿ ನಡೆದಿದ್ದು, ಪ್ರಕರಣ ಗುಡಿಬಂಡೆ ಪೊಲೀಸ್ ಠಾಣೆಯಲ್ಲಿ ಧಾಖಲಾಗಿದೆ.
![ಚಂದ್ರಮೌಳೇಶ್ವರ ದೇವರ ಪಲ್ಲಕ್ಕಿ ಪೂಜೆ ವೇಳೆ ಗುಂಪು ಘರ್ಷಣೆ, ಚಾಕುವಿನಿಂದ ಇರಿತ group-clashes-in-chandramauleshwar-god-pallakki](https://etvbharatimages.akamaized.net/etvbharat/prod-images/768-512-5178637-thumbnail-3x2-dead.jpg)
ತಾಲೂಕಿನ ಜಂಗಲಹಳ್ಳಿ ಗ್ರಾಮದ ಚಂದ್ರಮೌಳೇಶ್ವರ ದೇವರ ಪಲ್ಲಕ್ಕಿ ಪೂಜೆ ಮಾಡಿಸುವ ವೇಳೆ ನವೀನ್ ಮತ್ತು ಚನ್ನರಾಯಪ್ಪ ನಡುವೆ ಜಗಳ ಉಂಟಾಗಿ ನವೀನ್ ಕಬ್ಬಿಣದ ರಾಡ್ ನಿಂದ ಚನ್ನರಾಯಪ್ಪ ಹಣೆಗೆ ಹೊಡೆದಿದ್ದಾನೆ. ಇತ್ತ ಚನ್ನರಾಯಪ್ಪ ಕಡೆಯ ಜಯಚಂದ್ರ ಎಂಬುವವರು ಗಲಾಟೆ ನಿಲ್ಲಿಸಲು ಬಂದಿದ್ದಾರೆ ಎಂದು ಹೇಳಲಾಗಿದೆ.
ಆದ್ರೆ ಜಯಚಂದ್ರ ಗಲಾಟೆ ಮಾಡಲು ಬಂದಿದ್ದಾನೆ ಎಂದು ತಿಳಿದ ನವೀನ್ ಕಡೆಯ ಹರೀಶ್ ಮತ್ತು ವಿಜಯ್ ಕುಮಾರ್ ಎಂಬುವವರು ಸೇರಿ ಜಯಚಂದ್ರ ಹೊಟ್ಟೆಗೆ ಚಾಕುವುನಿಂದ ತಿವಿದಿದ್ದಾರೆ ಎಂದು ತಿಳಿದುಬಂದಿದೆ. ಸದ್ಯ ಜಯಚಂದ್ರ ಗುಡಿಬಂಡೆ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಗುಡಿಬಂಡೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.