ಚಿಕ್ಕಬಳ್ಳಾಪುರ: ಬಹಿರ್ದೆಸೆಗೆ ಹೋದ ಅಜ್ಜಿ-ಮೊಮ್ಮಗಳು ಕೃಷಿ ಹೊಂಡದಲ್ಲಿ ಕಾಲು ತೊಳೆದುಕೊಳ್ಳಲು ಹೋಗಿ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಗೌರಿಬಿದನೂರು ತಾಲೂಕಿನ ಪಿಂಜಾರಹಳ್ಳಿ ಗ್ರಾಮದಲ್ಲಿ ನಡೆದಿದೆ.
ಮಂಜುಳಾ (42), ಮೊಮ್ಮಗಳು ಲಕ್ಷ್ಮಿ (6) ಮೃತ ದುರ್ದೈವಿಗಳು ಎಂದು ತಿಳಿದು ಬಂದಿದೆ. ತೊಂಡೇಬಾವಿ ಹೋಬಳಿ ಪಿಂಜಾರಹಳ್ಳಿ ಗ್ರಾಮದಲ್ಲಿ ಇಂದು ಬೆಳಗ್ಗೆ 7ರಿಂದ 8 ಗಂಟೆ ಸಮಯದಲ್ಲಿ ಬಯಲು ಬಹಿರ್ದೆಸೆಗೆ ಹೋಗಿದ್ದ ಅಜ್ಜಿ ಹಾಗೂ ಮೊಮ್ಮಗಳು ಕಾಲು ತೊಳೆದುಕೊಳ್ಳಲು ಪಕ್ಕದಲ್ಲೇ ಇದ್ದ ನರಸರೆಡ್ಡಿ ಎಂಬುವವರ ಜಮೀನಿನಲ್ಲಿದ್ದ ಕೃಷಿ ಹೊಂಡದ ಬಳಿ ಹೋಗಿ ಅಲ್ಲಿ ಜಾರಿ ಬಿದ್ದು ಸಾವನ್ನಪ್ಪಿರುವುದಾಗಿ ತಿಳಿದು ಬಂದಿದೆ.