ಚಿಕ್ಕಬಳ್ಳಾಪುರ:ಶಿಡ್ಲಘಟ್ಟ ತಾಲ್ಲೂಕಿನ ಕೆ. ಮುತ್ತುಕದಹಳ್ಳಿ ಗ್ರಾಮದಲ್ಲಿ ಶ್ರೀ ಅಯ್ಯಪ್ಪ ಸೇವಾ ಸಮಿತಿ ಭಕ್ತ ವೃಂದದಿಂದ ಅಯ್ಯಪ್ಪ ಜ್ಯೋತಿ ಮೆರವಣಿಗೆ ನಡೆಸಲಾಯಿತು.
ಅದ್ಧೂರಿಯ ಅಯ್ಯಪ್ಪ ಸ್ವಾಮಿ ದೀಪೋತ್ಸವ, ವೇಣು ಗೋಪಾಲಸ್ವಾಮಿ ರಥೋತ್ಸವ - ಶಿಡ್ಲಘಟ್ಟ ತಾಲ್ಲೂಕಿನ ಅಯ್ಯಪ್ಪ ಸ್ವಾಮಿ ಮಹಾಪೂಜೆ
ಶಿಡ್ಲಘಟ್ಟ ತಾಲ್ಲೂಕಿನ ಕೆ. ಮುತ್ತುಕದಹಳ್ಳಿ ಗ್ರಾಮದಲ್ಲಿ ಶ್ರೀ ಅಯ್ಯಪ್ಪ ಸೇವಾ ಸಮಿತಿ ಭಕ್ತ ವೃಂದದಿಂದ ಅಯ್ಯಪ್ಪ ಜ್ಯೋತಿ ಮೆರವಣಿಗೆ ನಡೆಸಲಾಯಿತು. ಕೆ. ಮುತ್ತುಕದಹಳ್ಳಿ, ಚಿಂತಡಪಿ, ಕನ್ನಮಂಗಲ ಗ್ರಾಮಗಳ ಪ್ರಮುಖ ಬೀದಿಗಳಲ್ಲಿ ಅಯ್ಯಪ್ಪ ಸ್ವಾಮಿ ದೀಪೋತ್ಸವ ಹಾಗೂ ವೇಣು ಗೋಪಾಲಸ್ವಾಮಿ ರಥೋತ್ಸವ ಸಾಗಿತು. ಸಾವಿರಾರು ಭಕ್ತರು ಕಣ್ತುಂಬಿಕೊಂಡರು.
ಅದ್ಧೂರಿಯ ಅಯ್ಯಪ್ಪ ಸ್ವಾಮಿ ದೀಪೋತ್ಸವ ಮತ್ತು ವೇಣು ಗೋಪಾಲಸ್ವಾಮಿ ರಥೋತ್ಸವ
ಕೆ.ಮುತ್ತುಕದಹಳ್ಳಿ ನೆರೆಯ ಚಿಂತಡಪಿ ಮತ್ತು ಕನ್ನಮಂಗಲ ಗ್ರಾಮಗಳ ಪ್ರಮುಖ ಬೀದಿಗಳಲ್ಲಿ ಅಯ್ಯಪ್ಪ ಸ್ವಾಮಿ ದೀಪೋತ್ಸವ ಮತ್ತು ವೇಣು ಗೋಪಾಲಸ್ವಾಮಿ ರಥೋತ್ಸವ ಸಾಗಿತು. ಮೆರವಣಿಗೆ ವೇಳೆ ವಿವಿಧ ವಾದ್ಯಗಳು, ದೀಪಾಲಂಕಾರ ಮಹಾಪೂಜೆಯ ಮೆರುಗು ನೋಡುಗರನ್ನು ಆಕರ್ಷಿಸಿದವು. ಜೊತೆಗೆ ಅಯ್ಯಪ್ಪ ಸ್ವಾಮಿ ಮಾಲಾಧಾರಿಗಳು ಭಕ್ತಿ- ಭಾವದಿಂದ ಭಜನೆ ಮಾಡಿದರು.
ರಾತ್ರಿ ಅಗ್ನಿ ಕುಂಡ ಪ್ರವೇಶ ನಡೆದಿದ್ದು, ಭಕ್ತಾಧಿಗಳೆಲ್ಲ ಪೂಜೆಗೈದು ಪ್ರಸಾದ ಸ್ವೀಕರಿಸಿ ಭಕ್ತಿಯ ನಮನ ಸಲ್ಲಿಸಿದರು.