ಕರ್ನಾಟಕ

karnataka

ETV Bharat / state

ಅವರೆಕಾಯಿಗೆ ಮಾರುಕಟ್ಟೆಯಲ್ಲಿ ಬೆಲೆ ಇದ್ದರೂ ವ್ಯಾಪಾರಸ್ಥರು ಕಂಗಾಲು! - ETv Bharat kannada news

ಮಾರುಕಟ್ಟೆಯಲ್ಲಿ ಅವರೆಕಾಯಿ ವ್ಯಾಪಾರ ನಡೆಯುತ್ತಿದೆ. ಆದರೆ, ನಿರೀಕ್ಷಿತ ವ್ಯಾಪಾರ ಆಗುತ್ತಿಲ್ಲ ಎಂದು ವ್ಯಾಪಾರಿಗಳು ಬೇಸರ ವ್ಯಕ್ತಪಡಿಸಿದ್ದಾರೆ. ಕಾರಣವೇನು ನೋಡೋಣ.

Pea traders
ಅವರೆಕಾಯಿ ವ್ಯಾಪರಸ್ಥರು

By

Published : Dec 28, 2022, 6:39 PM IST

ಅವರೆಕಾಯಿಗೆ ಮಾರುಕಟ್ಟೆ ಸಮಾಚಾರ

ಚಿಕ್ಕಬಳ್ಳಾಪುರ :ಇತ್ತೀಚೆಗೆ ಸುರಿದ ಜೋರು ಮಳೆಯಿಂದಾಗಿ ಒಂದೆಡೆ ಜನಜೀವನ ಅಸ್ತವ್ಯಸ್ತವಾದರೆ ಮತ್ತೊಂದೆಡೆ ರೈತರಿಗೆ ಸಾಕಷ್ಟು ತೊಂದರೆಯಾಗಿದೆ. ಬೆಳೆದಿದ್ದ ತರಕಾರಿ ಬೆಳೆ ಹಾಳಾಗಿದ್ದವು. ಅಷ್ಟೋ ಇಷ್ಟೋ ಇರುವ ತರಕಾರಿಗಳಿಗೆ ಚಿನ್ನದ ಬೆಲೆ ಇದ್ದು ಕೊಂಡುಕೊಳ್ಳಲು ಜನಸಾಮಾನ್ಯರಿಗೆ ಸಾಧ್ಯವಾಗುತ್ತಿಲ್ಲ. ಆದರೀಗ ಅವರೆಕಾಯಿ ಸೀಜನ್ ಆರಂಭವಾಗಿದ್ದು ಮಾರುಕಟ್ಟೆಯಲ್ಲಿ ಎಲ್ಲಿ ನೋಡಿದರೂ ಅವರೆಕಾಯಿ ಘಮಲು ಆವರಿಸಿದೆ. ಗ್ರಾಹಕರು ಅವರೆಯ ಸವಿರುಚಿಗೆ ಮನಸೋತಿದ್ದರೂ ಕೊಂಡುಕೊಳ್ಳಲು ಮಾತ್ರ ಮುಂದೆ ಬರುತ್ತಿಲ್ಲ.

ಅವರೆಕಾಯಿ ಮಾರಾಟಕ್ಕೆ ಚಿಕ್ಕಬಳ್ಳಾಪುರದ ಗಂಗಮ್ಮಗುಡಿ ರಸ್ತೆ ಖ್ಯಾತಿ ಪಡೆದಿದೆ. ವ್ಯಾಪಾರಸ್ಥ ಶಿವಕುಮಾರ್​ ಮಾತನಾಡಿ, ಅವರೆ ಫಸಲು ಹಿಂದಿನ ವರ್ಷಕ್ಕೆ ಹೋಲಿಸಿದರೆ ಈ ವರ್ಷ ತುಂಬಾ ಚೆನ್ನಾಗಿತ್ತು. ಮೊನ್ನೆ ಆದಂತಹ ಮಳೆಯಿಂದಾಗಿ ಅವರೆ ಗಿಡಗಳು ಉದುರಿ ಹೋಗಿವೆ. ಇದರ ಮಧ್ಯೆವೂ ಬೆಲೆ ನೋಡುವುದಾರೆ ಕಳೆದ ವರ್ಷ 100 ರೂಪಾಯಿಗೆ 4 ಕೆಜಿ ಮಾರಾಟ ಆಗುತ್ತಿದ್ದು, ಈ ವರ್ಷ 100 ರೂ ಗೆ 2 ಕೆಜಿ ಮಾರಾಟ ಮಾಡುತ್ತಿದ್ದೆವು. ಇದಕ್ಕಾಗಿ ಗ್ರಾಹಕರು ಬರುತ್ತಿಲ್ಲ ಎಂದು ಬೇಸರ ಹೇಳಿಕೊಂಡರು.

ಇದರಿಂದಾಗಿ ರೈತರು ಬೆಳೆದ ಫಸಲನ್ನು ಕೊಡುತ್ತಿಲ್ಲ. ಕೇವಲ ಕೆಜಿ ಗೆ 2 ರೂ ಅಷ್ಟೇ ಲಾಭ ಸಿಗುತ್ತಿದ್ದು ಬೆಳ್ಳಿಗೆಯಿಂದ ರಾತ್ರಿಯವರೆಗೆ ಅವರೆಕಾಯಿ ಮಾರಾಟ ಮಾಡಿದರೆ 500 ರೂ ರಿಂದ 600 ರೂ ಮಾತ್ರ ಉಳಿಯುತ್ತಿದೆ. ಈ ಹಿಂದೆ ಚಿಕ್ಕಬಳ್ಳಾಪುರ ಟೌನ್​ ಸುತ್ತಮುತ್ತಲಿನ ಹಳ್ಳಿಯಿಂದ ಅವರೆಕಾಯಿ ಬರುತ್ತಿತ್ತು. ಆದರೆ ಇಂದು ನಾವೇ 50 ಕಿಮೀ ದೂರ ಹೋಗಿ ತೆಗೆದುಕೊಂಡು ಬಂದು ಮಾರಾಟ ಮಾಡುವ ಸನ್ನಿವೇಶ ಎದುರಾಗಿದೆ ಎಂದರು.

ಇದನ್ನೂ ಓದಿ:ಇವರೇ.. ಮೈಸೂರಿನಲ್ಲಿ ನಾಲ್ಕು ದಿನ ಅವರೆ ಕಾಳು ಮೇಳ

ABOUT THE AUTHOR

...view details