ಕರ್ನಾಟಕ

karnataka

ETV Bharat / state

ಹೆಣ್ಣೆಂದು ಹಸುಗೂಸಿನ ಕತ್ತಿಗೆ ನೇಣು ಬಿಗಿದು ಕಿಟಕಿಯಲ್ಲಿ ಎಸೆದ ಕ್ರೂರಿ.. ಇಂಥವರೂ ಇರ್ತಾರೆ.. - ಹುಟ್ಟಿದ ತಕ್ಷಣ ಹೆಣ್ಣುಮಗುವೊಂದನ್ನು ನೇಣು ಬಿಗಿದು ಕೊಲೆ

ಪ್ರಕರಣಕ್ಕೆ ಸಂಬಂಧಿಸಿದಂತೆ ನಗರ ಠಾಣೆ ಪೊಲೀಸರು ಆಸ್ಪತ್ರೆಗೆ ಭೇಟಿ ನೀಡಿ, ಆಸ್ಪತ್ರೆಯ ಸಿಸಿಟಿವಿ ಕ್ಯಾಮೆರಾ ಪರಿಶೀಲನೆ ಮಾಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ..

Public hospital in Chintamani
ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ನಗರ

By

Published : Jul 3, 2021, 3:25 PM IST

Updated : Jul 3, 2021, 3:37 PM IST

ಚಿಕ್ಕಬಳ್ಳಾಪುರ: ಹೆಣ್ಣುಮಗು ಎಂಬ ಕಾರಣಕ್ಕೆ ಹಸುಗೂಸಿನ ಕತ್ತಿಗೆ ಟೈನ್‌ಹುರಿಯಿಂದ ನೇಣು ಬಿಗಿದು ಶೌಚಾಲಯದ ಕಿಟಕಿಯಲ್ಲಿ ಎಸೆದಿರುವ ಘಟನೆ ಜಿಲ್ಲೆಯ ಚಿಂತಾಮಣಿ ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ನಡೆದಿದೆ.

ಇಂದು ಬೆಳ್ಳಗೆ ಶೌಚಾಲಯ ಸ್ವಚ್ಛಗೊಳಿಸಲು ಬಂದ ಸಿಬ್ಬಂದಿ ನವಜಾತ ಶಿಶು ಕಿಟಕಿಯಲ್ಲಿರುವುದನ್ನು ಕಂಡು ಕೂಡಲೇ ವೈದ್ಯರ ಗಮನಕ್ಕೆ ತಂದು ಚಿಕಿತ್ಸೆ ಕೊಡಿಸಲು ಮುಂದಾಗಿದ್ದಾರೆ. ಆದರೆ, ಆ ವೇಳೆಯೊಳಗೆ ಮಗು ಮೃತಪಟ್ಟಿತ್ತು ಎಂದು ತಿಳಿದು ಬಂದಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ನಗರ ಠಾಣೆ ಪೊಲೀಸರು ಆಸ್ಪತ್ರೆಗೆ ಭೇಟಿ ನೀಡಿ, ಆಸ್ಪತ್ರೆಯ ಸಿಸಿಟಿವಿ ಕ್ಯಾಮೆರಾ ಪರಿಶೀಲನೆ ಮಾಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Last Updated : Jul 3, 2021, 3:37 PM IST

ABOUT THE AUTHOR

...view details