ಚಿಕ್ಕಬಳ್ಳಾಪುರ: ಜಿಲ್ಲೆಯಾದ್ಯಂತ ಮುಂಜಾನೆಯಿಂದಲೂ ಮೋಡ ಮುಸುಕಿದ ವಾತಾವರಣವಿದ್ದು ಸಂಜೆಯ ನಂತರ ಮಳೆರಾಯ ಸುರಿದ ಕಾರಣ ಜಿಲ್ಲೆಯ ಜನರು ಫುಲ್ ಖುಷ್ ಆಗಿದ್ದಾರೆ.
ವರಣುನ ಕೃಪೆಗೆ ಸಲಾಂ ಎಂದ ಚಿಕ್ಕಬಳ್ಳಾಪುರ ಜನತೆ - ಮಳೆರಾಯನ ಆರ್ಭಟ
ಚಿಕ್ಕಬಳ್ಳಾಪುರ ಜಿಲ್ಲೆಯಾದ್ಯಂತ ಮುಂಜಾನೆಯಿಂದಲೂ ಮೋಡ ಮುಸುಕಿದ ವಾತಾವರಣವಿತ್ತು, ಸಂಜೆಯ ನಂತರ ಮಳೆರಾಯ ಸುರಿದಿದ್ದು, ಜನರು ಫುಲ್ ಖುಷ್ ಆಗಿದ್ದಾರೆ.
ಚಿಕ್ಕಬಳ್ಳಾಪುರ
ಜಿಲ್ಲೆಯ ಹಲವೆಡೆ ಮುಂಜಾನೆಯಿಂದಲೂ ತುಂತುರು ಮಳೆಯಾಗುತ್ತಿತ್ತು. ನಿನ್ನೆ ಸಂಜೆಯಾಗುವಷ್ಟರಲ್ಲಿ ಮಳೆರಾಯನು ತನ್ನ ಕೃಪೆಯನ್ನು ತೋರಿದ್ದಾನೆ. ಸದ್ಯ ಜಿಲ್ಲೆಯ ಜನತೆ ಗಣೇಶ ಹಬ್ಬದ ಸಂಭ್ರಮಾಚರಣೆಯಲ್ಲಿ ತೊಡಗಿದ್ದು, ಮಳೆರಾಯನ ಆರ್ಭಟದಿಂದ ಮತ್ತಷ್ಟು ಖುಷಿಯನ್ನು ತಂದು ಕೊಟ್ಟ ವರುಣನಿಗೆ ಸಲಾಂ ಹೇಳಿದ್ದಾರೆ.
ಇನ್ನೂ ಜಿಲ್ಲೆ ಸೇರಿದಂತೆ ಚಿಂತಾಮಣಿ, ಶಿಡ್ಲಘಟ್ಟ, ಗೌರಿ ಬಿದನೂರು ಸೇರಿದಂತೆ ಹಲವೆಡೆ ಮಳೆರಾಯನು ಭೂಮಿಯನ್ನು ತಂಪಾಗಿಸಿದ್ದಾನೆ.