ಚಿಕ್ಕಬಳ್ಳಾಪುರ: ಜಿ.ಹೆಚ್ ಪೌಂಡೇಶನ್ನಿಂದ ವಿನಯ್ ಶಾಮ್ ಆಯೋಜಿಸಿದ್ದ ಬೀದಿಬದಿ ವ್ಯಾಪಾರಿಗಳಿಗೆ ದಿನಸಿ ಕಿಟ್ ವಿತರಣಾ ಕಾರ್ಯಕ್ರಮದಲ್ಲಿ ರಮೇಶ್ ಕುಮಾರ್, ಹೆಚ್.ಎನ್ ಶಿವಶಂಕರರೆಡ್ಡಿ, ವಿ ಮುನಿಯಪ್ಪ, ಎಸ್.ಎನ್.ಸುಬ್ಬಾರೆಡ್ಡಿ, ಕೃಷ್ಣಬೈರೇಗೌಡ ಭಾಗವಹಿಸಿದ್ರು.
ಈ ವೇಳೆ ಮಾತನಾಡಿದ ರಮೇಶ್ ಕುಮಾರ್, ಪರೋಕ್ಷವಾಗಿ ಸಚಿವ ಸುಧಾಕರ್ ವಿರುದ್ಧ ಅವರ ಸ್ವಗ್ರಾಮ ಪರೇಸಂದ್ರದಲ್ಲಿ ವಾಕ್ಸಮರ ನಡೆಸಿದ್ರು. ಕಾಂಗ್ರೆಸ್ ಪಕ್ಷ ಈ ಕ್ಷೇತ್ರದಲ್ಲಿ ಇನ್ನೂ ಜೀವಂತವಾಗಿದೆ. ಸ್ವಾತಂತ್ರ್ಯ ಬಂದ ಮೇಲೆ ಬಿಜೆಪಿ ಹುಟ್ಟಿಕೊಂಡಿದ್ದು, ಅದಕ್ಕೂ ಮುಂಚೆ ಕಾಂಗ್ರೆಸ್ ಪಕ್ಷ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಭಾಗವಹಿಸಿತ್ತು. ಬಿಜೆಪಿಯವರು ದುರಹಂಕಾರದಿಂದ ಮೆರೆದರೆ ಜನ ಚುನಾವಣೆಯಲ್ಲಿ ಬುದ್ದಿ ಕಲಿಸುತ್ತಾರೆ. ಜನತಾ ನ್ಯಾಯಾಲಯದಲ್ಲಿ ತೀರ್ಪು ಸಿಗುತ್ತದೆ ಎಂದರು.