ಕರ್ನಾಟಕ

karnataka

ETV Bharat / state

ಓವರ್ ಬಿಲ್ಡಪ್​ ನೀಡಿ ಪೊಲೀಸರ ಅತಿಥಿಯಾದ ಗೃಹ ಸಚಿವರ ನಕಲಿ ಸಹೋದರ!

ವಿವಿಧ ವೇಷದಲ್ಲಿ ಬಂದು ವ್ಯಕ್ತಿವೋರ್ವನ ಅಸಲಿ ಬಣ್ಣ ಬಯಲಾಗಿದೆ. ಪೊಲೀಸರು ಅನುಮಾನಿಸಿ ವಿಚಾರಣೆ ನಡೆಸಿದಾಗ ನಕಲಿ ವ್ಯಕ್ತಿ ಎಂದು ತಿಳಿದು ಬಂದಿದೆ. ಚಾಲಾಕಿ ವ್ಯಕ್ತಿ ಈಗ ಪೊಲೀಸರ ಅತಿಥಿಯಾಗಿದ್ದಾನೆ.

ಓವರ್ ಬಿಲ್ಡಪ್​ ನೀಡಿ ಪೊಲೀಸರ ಅತಿಥಿಯಾದ ಗೃಹ ಸಚಿವರ ನಕಲಿ ತಮ್ಮ
ಓವರ್ ಬಿಲ್ಡಪ್​ ನೀಡಿ ಪೊಲೀಸರ ಅತಿಥಿಯಾದ ಗೃಹ ಸಚಿವರ ನಕಲಿ ತಮ್ಮ

By

Published : Aug 28, 2020, 12:32 PM IST

ಚಿಕ್ಕಬಳ್ಳಾಪುರ: ಗೃಹ ಸಚಿವ ಬಸವರಾಜ್​ ಬೊಮ್ಮಾಯಿ ಅವರ ಹೆಸರೇಳಿಕೊಂಡು ಸರ್ಕಾರಿ ಕೆಲಸಗಳನ್ನು ಮಾಡಿಸಿಕೊಳ್ಳುತ್ತಿದ್ದ ವ್ಯಕ್ತಿವೋರ್ವನನ್ನು ಪೊಲೀಸರು ಬಂಧಿಸಿದ ಘಟನೆ ಜಿಲ್ಲೆಯ ಗೌರಿಬಿದನೂರು ತಾಲೂಕು ಮಂಚೇನಹಳ್ಳಿ ಠಾಣೆಯಲ್ಲಿ ನಡೆದಿದೆ.

ದೊಡ್ಡಬಳ್ಳಾಪುರದ ಬಾಶೆಟ್ಟಿಹಳ್ಳಿಯ ನಿವಾಸಿ ಬಂಧಿತ ಆರೋಪಿ. 'ನಾನು ಗೃಹ ಸಚಿವ ಬಸವರಾಜ್​ ಬೊಮ್ಮಾಯಿ ಅವರ ಸಹೋದರ ಮಹೇಶ್ ಬೊಮ್ಮಾಯಿ' ಎಂದು ಪರಿಚಯಿಸಿಕೊಂಡ ವ್ಯಕ್ತಿ ಗೌರಿಬಿದನೂರು, ತಾಲೂಕಿನ ಮಂಚೇನಹಳ್ಳಿ ಪೊಲೀಸ್ ಠಾಣೆಗೆ ಕರೆ ಮಾಡಿ ನಮ್ಮ ಸಂಬಂಧಿಕರು ಶಿಕ್ಷಕ ರವಿಪ್ರಕಾಶ್​ಗೆ ಕಾನೂನು ಪ್ರಕಾರ ಕೆಲಸ ಮಾಡಿಕೊಡಿ ಎಂದು ಠಾಣೆಯ ಪಿಎಸ್ಐ ಲಕ್ಷ್ಮಿನಾರಾಯಣ ಅವರಿಗೆ ತಿಳಿಸಿದ್ದಾರೆ.

ನಂತರ ಮತ್ತೆ ಪೊಲೀಸ್ ಠಾಣೆಗೆ ಕಾಲ್ ಮಾಡಿ ನಾನು ಗೃಹ ಸಚಿವರ ಪಿಎ ಎಂದು ಹೇಳಿ ಕೆಲಸ‌ ಮಾಡುವಂತೆ ಸೂಚಿಸಿದ್ದಾನೆ. ಬಳಿಕ ಸಹೋದರ ಹಾಗೂ ಶಿಕ್ಷಕನ ಜೊತೆ ವಕೀಲ ವೇಷದಲ್ಲಿ ಬಂದು ನಾನು ಗೃಹ ಸಚಿವರ ಕಾನೂನು ಸಲಹೆಗಾರನೆಂದು ಹೇಳಿಕೊಂಡಿದ್ದಾನೆ. ನಂತರ ಪೊಲೀಸರು ಅನುಮಾನಿಸಿ ವಿಚಾರಣೆ ನಡೆಸಿದಾಗ ಈತನ ಅಸಲಿ ಬಣ್ಣ ಬಯಲಾಗಿದೆ. ರಾಜಕೀಯ ನಾಯಕರ ಹೆಸರು ಹೇಳಿದರೆ ಸರ್ಕಾರಿ ಕೆಲಸಗಳು ಬೇಗನೇ ಆಗುತ್ತವೆ ಎಂದು ತಿಳಿದಿದ್ದ ವ್ಯಕ್ತಿ ಈಗ ಪೊಲೀಸರ ಅತಿಥಿಯಾಗಿದ್ದಾನೆ.

ಸದ್ಯ ಕೃತ್ಯದಲ್ಲಿ‌ ಭಾಗಿಯಾಗಿದ್ದ ಗೌರಿಬಿದನೂರು ತಾಲೂಕಿನ ವಂಚಕ ಬಸವರಾಜುನನ್ನು ಐಪಿಸಿ 419 ಹಾಗೂ 420 ಅಡಿಯಲ್ಲಿ ದೂರು ದಾಖಲಿಸಿಕೊಂಡು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ABOUT THE AUTHOR

...view details