ಗೌರಿಬಿದನೂರು(ಚಿಕ್ಕಬಳ್ಳಾಪುರ): ಗೌರಿಬಿದನೂರು ತಾಲೂಕು ಡಿ.ಪಾಳ್ಯ ಗ್ರಾಮದ 4 ಮಂದಿ ಹಿಂದೂಪುರಕ್ಕೆ ಹೋಗಿ ಕೊರೊನಾ ಸೋಂಕಿನಿಂದ ಮೃತಪಟ್ಟ ವೃದ್ಧನ ಅಂತ್ಯಕ್ರಿಯೆಯಲ್ಲಿ ಭಾಗಿಯಾಗಿದ್ದರು. ಈ ಮಾಹಿತಿ ತಿಳಿದ ಪೊಲೀಸರು 4 ಮಂದಿಯನ್ನು ಕ್ವಾರಂಟೈನ್‌ಗೆ ಒಳಪಡಿಸಿದ್ದರು. ಈ 4 ಮಂದಿಯ ಗಂಟಲು ದ್ರವದ ಪರೀಕ್ಷೆ ಮಾಡಿಸಿದ್ದು ವರದಿ ನೆಗೆಟಿವ್ ಬಂದಿದೆ.
ಕೊರೊನಾಗೆ ಬಲಿಯಾದ ವೃದ್ಧನ ಅಂತ್ಯಕ್ರಿಯೆಗೆ ಹೋಗಿ ಬಂದವರಿಗೆ ಕ್ವಾರಂಟೈನ್ - four people quarantined and police registered case against them in Gowribidanuru
ಲಾಕ್‌ಡೌನ್ ನಿಯಮ ಉಲ್ಲಂಘಿಸಿ ಕೊರೊನಾ ಸೋಂಕಿನಿಂದ ಮೃತಪಟ್ಟ ಕಾರಣ ನಾಲ್ವರಿಗೆ ಪ್ರತ್ಯೇಕ ವಾಸ ನೀಡಲಾಗಿದೆ. ಜೊತೆಗೆ ನಿಯಮ ಮೀರಿದ್ದಕ್ಕಾಗಿ ಪೊಲೀಸರು ಪ್ರಕರಣವನ್ನೂ ದಾಖಲಿಸಿಕೊಂಡಿದ್ದಾರೆ.

ಕೊರೊನಾ ಸೋಂಕಿಂದ ಮೃತಪಟ್ಟ ವೃದ್ಧನ ಅಂತ್ಯಕ್ರಿಯೆಗೆ ಹೋಗಿ ಬಂದವರಿಗೆ ಕ್ವಾರಂಟೈನ್
ಲಾಕ್ ಡೌನ್ ಉಲ್ಲಂಘಿಸಿ ನೆರೆಯ ರಾಜ್ಯಕ್ಕೆ ಹೋಗಿ ಬಂದ ಹಿನ್ನೆಲೆಯಲ್ಲಿ ಮಂಚೇನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಒಟ್ಟು 9 ಮಂದಿ ವಿರುದ್ಧ ಐಪಿಸಿ ಸೆಕ್ಷನ್ 168, 169, 170 ಅಡಿ ಪ್ರಕರಣ ದಾಖಲಿಸಲಾಗಿದೆ.
TAGGED:
ಚಿಕ್ಕಬಳ್ಳಾಪುರ