ಚಿಕ್ಕಬಳ್ಳಾಪುರ:ಮಹಾರಾಷ್ಟ್ರದಿಂದ ಚಿಕ್ಕಬಳ್ಳಾಪುರ ಜಿಲ್ಲೆಗೆ ಬಂದಿರುವ 267 ಜನರ ಗಂಟಲು ದ್ರವ ಪರೀಕ್ಷೆಯಲ್ಲಿ ನಾಲ್ವರಿಗೆ ಪಾಸಿಟಿವ್ ಬಂದಿದ್ದು ಜಿಲ್ಲಾಡಳಿತಕ್ಕೆ ದೊಡ್ಡ ತಲೆನೋವಾಗಿದೆ.
ಸದ್ಯ ಮುಂಜಾನೆಯಷ್ಟೇ ಟ್ವಿಟರ್‌ನಲ್ಲಿ ಮಹಾರಾಷ್ಟ್ರದಿಂದ ಜಿಲ್ಲೆಗೆ ಬಂದವರಿಂದ ಸರಿಯಾದ ನಿದ್ದೆಯಿಲ್ಲ ಎಂದು ವೈದ್ಯಕೀಯ ಶಿಕ್ಚಣ ಸಚಿವರು ಮಾಹಿತಿ ಹಂಚಿಕೊಂಡಿದ್ದರು. ಸದ್ಯ ಇದರ ಬೆನ್ನಲೇ 4 ಜನರಲ್ಲಿ ಕೊರೊನಾ ಸೊಂಕು ದೃಢವಾಗಿದ್ದು, ಈಗ ಮತ್ತಷ್ಟು ಆತಂಕಕ್ಕೆ ಕಾರಣವಾಗಿದೆ.
ಮುಂಬೈಯಿಂದ ಬಂದ ನಾಲ್ವರಿಗೆ ಕೊರೊನಾ ಸೊಂಕು ಧೃಢ: ಜಿಲ್ಲಾಡಳಿತಕ್ಕೆ ಹೊಸ ತಲೆನೋವು ಈಗಾಗಲೇ 67 ಜನರಿಗೆ ನೆಗೆಟಿವ್ ಬಂದಿದ್ದು ಉಳಿದ 194 ಜನರ ಫಲಿತಾಂಶ ಬರಬೇಕಿದೆ. ಜಿಲ್ಲೆಯಲ್ಲಿ ಇದುವರೆಗೂ 7,988 ಜನರಿಗೆ ಗಂಟಲು ದ್ರವ ಪರೀಕ್ಷೆ ನಡೆಸಿದ್ದು, ಅದರಲ್ಲಿ 7,110 ನೆಗೆಟಿವ್, 30 ಜನರಿಗೆ ಪಾಸಿಟಿವ್ ಬಂದಿದೆ. ಇನ್ನೂ 848 ಜನರ ಫಲಿತಾಂಶದ ನಿರೀಕ್ಷೆಯಲ್ಲಿ ಜಿಲ್ಲಾಡಳಿತವಿದೆ.
ಒಟ್ಟಾರೇ ಒಂದೇ ದಿನ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ 6 ಕೊರೊನಾ ಸೋಂಕಿತ ಪ್ರಕರಣಗಳು ಪತ್ತೆಯಾಗಿವೆ. ಒಟ್ಟು 30 ಜನ ಸೋಂಕಿತರಲ್ಲಿ ಇಬ್ಬರು ಸಾವನ್ನಪ್ಪಿದ್ದು, 18 ಜನ ಸಂಪೂರ್ಣ ಗುಣಮುಖರಾಗಿದ್ದಾರೆ. 10 ಜನ ಚಿಕಿತ್ಸೆ ಪಡೆಯುತ್ತಿದ್ದಾರೆ.