ಚಿಕ್ಕಬಳ್ಳಾಪುರ:ಜಿಲ್ಲೆಯ ಹಿರೇನಾಗವಲ್ಲಿ ಕಲ್ಲು ಗಣಿಯಲ್ಲಿ ಜಿಲೆಟಿನ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಕಲ್ಲು ಗಣಿ ಮಾಲೀಕರಿಬ್ಬರು ಸೇರಿದಂತೆ ಇದುವರೆಗೆ ಒಟ್ಟೂ ಆರು ಮಂದಿಯನ್ನು ಬಂಧಿಸಲಾಗಿದೆ.
ಹಿರೇನಾಗವಲ್ಲಿ ಜಿಲೆಟಿನ್ ಸ್ಫೋಟ ಪ್ರಕರಣ: 6 ಮಂದಿ ಆರೋಪಿಗಳ ಬಂಧನ - gelatin blast in chikmagalore quarry news

08:57 February 24
ಹಿರೇನಾಗವಲ್ಲಿ ಕಲ್ಲು ಗಣಿಯ ಜಿಲೆಟಿನ್ ಸ್ಫೋಟ ಪ್ರಕರಣದ ಆರು ಮಂದಿ ಆರೋಪಿಗಳನ್ನು ಪೊಲೀಸರು ಆಂಧ್ರಪ್ರದೇಶದಲ್ಲಿ ಬಂಧಿಸಿ ಕರೆತಂದಿದ್ದಾರೆ.
ಕಲ್ಲು ಗಣಿಯ ಮಾಲೀಕರಲ್ಲೊಬ್ಬನಾದ A4 ವೆಂಕಟಶಿವ ರೆಡ್ಡಿ ಎಂಬಾತನನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇದಕ್ಕೂ ಮುನ್ನ ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯ ಗೋರಂಟ್ಲದಲ್ಲಿ ತಲೆಮರೆಸಿಕೊಂಡಿದ್ದ ಸ್ಫೋಟ ಪ್ರಕರಣದ ಎರಡನೇ ಆರೋಪಿ ಗಣಿ ಮಾಲೀಕ ರಾಘವೇಂದ್ರ ರೆಡ್ಡಿ, A5 ಪ್ರವೀಣ್, A7 ಡ್ರೈವರ್ ರಿಯಾಜ್ ಮತ್ತು A14 ಮಧುಸೂದನ್ ರೆಡ್ಡಿಯನ್ನು ಬಂಧಿಸಲಾಗಿತ್ತು. ಸ್ಫೋಟಕಗಳ ಸಾಗಾಣಿಕೆಯಲ್ಲಿ ತೊಡಗಿದ್ದ ಗಂಗೋಜಿರಾವ್ ಎಂಬಾತನ್ನು ನಿನ್ನೆ ಪೊಲೀಸರು ಬಂಧಿಸಿದ್ದರು.
ಸದ್ಯ ಪೊಲೀಸರಿಂದ ಮತ್ತೊಬ್ಬ ಆರೋಪಿ ಬಿಜೆಪಿ ಮುಖಂಡ ಹಾಗೂ ರೈಲ್ವೆ ಸಮಿತಿ ಸದಸ್ಯ ಗುಡಿಬಂಡೆ ನಾಗರಾಜ್ಗಾಗಿ ಪೊಲೀಸರು ತೀವ್ರ ಶೋಧ ನಡೆಸುತ್ತಿದ್ದಾರೆ.
ಇದನ್ನೂ ಓದಿ:ಜಿಲೆಟಿನ್ ಸ್ಫೋಟದಲ್ಲಿ 6 ಜನರ ದೇಹ ಛಿದ್ರ ಛಿದ್ರ: ಮೃತರ ಗುರುತು ಪತ್ತೆ