ಚಿಕ್ಕಬಳ್ಳಾಪುರ: ಕಾಂಗ್ರೆಸ್ ಅಭ್ಯರ್ಥಿಯ ಪರ ಮತಯಾಚನೆ ನಡೆಸುವ ವೇಳೆ ಮಾಜಿ ಸ್ಪೀಕರ್ ರಮೇಶ್ ಕುಮಾರ್, ಕೆಜಿಎಫ್ ಬಾಬು ಯಾರು ಅಂತಾನೇ ನನಗೆ ಗೊತ್ತಿಲ್ಲ ಎಂದು ಹೇಳಿದ್ದಾರೆ.
ಕೆಜಿಎಫ್ ಬಾಬು ಯಾರು, ಅವರಿಗೆ ABCD ಬರುತ್ತೋ, ಇಲ್ವೋ ಗೊತ್ತಿಲ್ಲ : ರಮೇಶ್ ಕುಮಾರ್ - ಕೆಜಿಎಫ್ ಬಾಬು ಕುರಿತು ಮಾಜಿ ಸ್ಪೀಕರ್ ರಮೇಶ್ ಕುಮಾರ್ ಹೇಳಿಕೆ
ನನಗೆ ಕೆಜಿಎಫ್ ಬಾಬು ಯಾರು ಅಂತಾನೇ ಗೊತ್ತಿಲ್ಲ. ಅವರಿಗೆ ಎಬಿಸಿಡಿ ಬರುತ್ತೋ, ಅ ಆ ಇ ಈ ಬರುತ್ತೋ ತಿಳಿದಿಲ್ಲ. ನನಗೆ ಮಾತ್ರ ಅ ಆ ಇ ಈ ಬರುತ್ತೆ ಎಂದು ಮಾಜಿ ಸ್ಪೀಕರ್ ರಮೇಶ್ ಕುಮಾರ್ ಹೇಳಿದ್ದಾರೆ.
ನಗರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ಮತಯಾಚನೆ ನಡೆಸಿದ ರಮೇಶ್ ಕುಮಾರ್, ನನಗೆ ಕೆಜಿಎಫ್ ಬಾಬು ನನಗೆ ಯಾರು ಅಂತಾ ಗೊತ್ತಿಲ್ಲ. ಅವರಿಗೆ ಎಬಿಸಿಡಿ ಬರುತ್ತೋ ಅ ಆ ಇ ಈ ಬರುತ್ತೋ ಗೊತ್ತಿಲ್ಲ. ನನಗೆ ಮಾತ್ರ ಅ ಆ ಇ ಈ ಬರುತ್ತೆ ಎಂದು ಹೇಳಿಕೆ ನೀಡಿದ್ದಾರೆ.
ಬಿಜೆಪಿಯವರ ಕೆಲಸ ಅವರದು, ನಮ್ಮ ಕೆಲಸ ನಮ್ಮದು. ಇನ್ನೂ ಕಳೆದ ಎರಡು ದಿನಗಳ ಹಿಂದೆ ದೇವೇಗೌಡರು ಚಿಕ್ಕಬಳ್ಳಾಪುರ ಜಿಲ್ಲೆಗೆ ಭೇಟಿ ನೀಡಿದ ವೇಳೆ ರಮೇಶ್ ಕುಮಾರ್ ಅವರ ಬಗ್ಗೆ ಕಿಡಿಕಾರಿದ್ದರು. ಈ ಬಗ್ಗೆ ಮಾತನಾಡಿದ ರಮೇಶ್ ಕುಮಾರ್, ದೇವೇಗೌಡ್ರು ಅಂದ್ರೆ ತಮಾಷೆನಾ. ದೇಶದ ಪ್ರಧಾನಿಯಾಗಿದ್ದವರು, ದೊಡ್ಡವರ ಬಗ್ಗೆ ನಾನು ಮಾತನಾಡಲ್ಲ, ನಾನು ಇನ್ನು ಅಷ್ಟು ಎತ್ತರಕ್ಕೆ ಬೆಳದಿಲ್ಲ ಅವರು ಏನೇ ಅಂದ್ರು ನಮಗೆ ಆಶೀರ್ವಾದ ಎಂದರು.