ಚಿಕ್ಕಬಳ್ಳಾಪುರ: ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಎಂ.ರಾಜಣ್ಣ ಇಂದು ಅಧಿಕೃತವಾಗಿ ಬಿಜೆಪಿ ಪಕ್ಷ ಸೇರಿದ್ದಾರೆ.
'ತೆನೆ' ಪಕ್ಷಕ್ಕೆ ಕೈ ಕೊಟ್ಟು 'ಕಮಲ' ಮುಡಿದ ಮಾಜಿ ಶಾಸಕ ಎಂ.ರಾಜಣ್ಣ - ಮಾಜಿ ಶಾಸಕ ರಾಜಣ್ಣ ಅಧಿಕೃತವಾಗಿ ಇಂದು ಬಿಜೆಪಿಗೆ
ನಗರದ ಸಿದ್ದೇಶ್ವರ ಸಮುದಾಯ ಭವನದಲ್ಲಿ ಆಯೋಜಿಸಿದ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಹಾಗೂ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಸಮ್ಮುಖದಲ್ಲಿ ಎಂ.ರಾಜಣ್ಣ ಜೆಡಿಎಸ್ ತ್ಯಜಿಸಿ ಕೇಸರಿ ಪಕ್ಷ ಸೇರ್ಪಡೆಗೊಂಡರು. ಈ ಮೂಲಕ ಶಿಡ್ಲಘಟ್ಟ ಕ್ಷೇತ್ರದಲ್ಲಿ ಕಳೆದ 30 ವರ್ಷಗಳ ಜನತಾ ಪರಿವಾರದ ನಂಟನ್ನು ಅವರು ಕಳೆದುಕೊಂಡಿದ್ದಾರೆ.

'ಕಮಲ' ಮುಡಿದ ಮಾಜಿ ಶಾಸಕ ಎಂ.ರಾಜಣ್ಣ
ನಗರದ ಸಿದ್ದೇಶ್ವರ ಸಮುದಾಯ ಭವನದಲ್ಲಿ ಆಯೋಜಿಸಿದ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಹಾಗೂ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಸಮ್ಮುಖದಲ್ಲಿ ಅವರು ಕೇಸರಿ ಪಕ್ಷ ಸೇರ್ಪಡೆಗೊಂಡರು.
ಕಳೆದ ವಿಧಾನಸಭೆ ಚುನಾವಣೆಯಲ್ಲಿ ಎಂ. ಮುನಿಯಪ್ಪ ವಿರುದ್ದ ರಾಜಣ್ಣ ಸೋತಿದ್ದು, ಜೆಡಿಎಸ್ ಟಿಕೆಟ್ ನೀಡುವ ವಿಚಾರದಲ್ಲಿಯೂ ಗೊಂದಲ ಉಂಟು ಮಾಡಿದ್ದರು. ಆದರೆ ಈ ಬಾರಿಯ ಚುನಾವಣೆಯಲ್ಲಿ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ರಾಜಣ್ಣ ಅವರಿಗೆ ಬದಲಾಗಿ ಮೇಲೂರು ರವಿಕುಮಾರ್ಗೆ ಟಿಕೆಟ್ ನೀಡಿದ್ದರು.