ಬೆಂಗಳೂರು: ಸಾಮಾಜಿಕ ಉದ್ದೇಶದಿಂದ ಒಂದು ಜಗತ್ತು, ಒಂದು ಕುಟುಂಬ ಪರಿಕಲ್ಪನೆಯಡಿ ಸದ್ಗುರು ಮಧುಸೂದನ್ ಸಾಯಿ ಗ್ಲೋಬಲ್ ಹುಮ್ಯಾನಿಟೇರಿಯನ್ ಮಿಷನ್ ವತಿಯಿಂದ ಗುರುವಾರ ಚಿಕ್ಕಬಳ್ಳಾಪುರ ಜಿಲ್ಲೆಯ ಸತ್ಯಸಾಯಿ ಗ್ರಾಮದ ಕೃಷ್ಣ ಕ್ರೀಡಾಂಗಣದಲ್ಲಿ ಟಿ-20 ಪಂದ್ಯ ಹಮ್ಮಿಕೊಳ್ಳಲಾಗಿದೆ.
ಅಪೌಷ್ಠಿಕತೆ ತೊಲಗಿಸಲು ಶಿಕ್ಷಣ ಹಾಗೂ ಆರೋಗ್ಯ ಕ್ಷೇತ್ರದಲ್ಲಿ ತಮ್ಮದೇ ರೀತಿಯಲ್ಲಿ ಹಲವು ವರ್ಷಗಳಿಂದ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿರುವ ಸತ್ಯಸಾಯಿ ಟ್ರಸ್ಟ್, ವಸುದೈವಂ ಕುಟುಂಬದ ಸಂದೇಶ ಸಾರಲು ಕ್ರಿಕೆಟ್ ಮೂಲಕ ಒಂದಾಗಿಸಲು ಮುಂದಾಗಿದೆ. ಪಂದ್ಯದ ಹಿನ್ನೆಲೆಯಲ್ಲಿ ಮಾಜಿ ಕ್ರಿಕೆಟಿಗ ಸುನಿಲ್ ಗವಾಸ್ಕರ್ ಹಾಗೂ ಮಿಷನ್ ಮುಖ್ಯಸ್ಥರಾದ ಶ್ರೀ ಮಧುಸೂದನ್ ಸಾಯಿ ಜಂಟಿ ಮಾಧ್ಯಮ ಸಂವಾದ ಹಮ್ಮಿಕೊಂಡು ಕ್ರಿಕೆಟ್ ಪಂದ್ಯದ ಹಿಂದಿನ ಉದ್ದೇಶ-ಭವಿಷ್ಯದ ಯೋಜನೆ ಹಾಗೂ ಅದರ ಸಾಕಾರ ಬಗ್ಗೆ ವಿಸ್ತಾರವಾಗಿ ಹಂಚಿಕೊಂಡರು.
ಮೊದಲಿಗೆ ಸುನಿಲ್ ಗವಾಸ್ಕರ್ ಮಾತನಾಡಿ, ''ಒಂದು ಜಗತ್ತು-ಒಂದು ಕುಟುಂಬದ ಕಲ್ಪನೆಯಡಿ ನಾಳೆ ಪಂದ್ಯ ಆಯೋಜಿಸಲಾಗಿದೆ. ಒಂದು ವರ್ಲ್ಡ್ ತಂಡಕ್ಕೆ ಸಚಿನ್ ತೆಂಡೂಲ್ಕರ್, ಒನ್ ಕುಟುಂಬದ ತಂಡಕ್ಕೆ ಯುವರಾಜ್ ಸಿಂಗ್ ನಾಯಕರಾಗಿದ್ದಾರೆ. ಎರಡು ತಂಡಗಳು ಸೆಣಸಾಡಲಿದ್ದು ದೇಶ ಹಾಗೂ ಅಂತಾರಾಷ್ಟ್ರೀಯ ಖ್ಯಾತ ಮಾಜಿ ಆಟಗಾರರು ಭಾಗಿಯಾಗುತ್ತಿದ್ದಾರೆ. ಕ್ರೀಡೆ ಹಾಗೂ ಸಂಗೀತ ಎಲ್ಲರನ್ನು ಒಂದುಗೂಡಿಸುವ ಶಕ್ತಿಯಿದೆ. ಅದೇ ರೀತಿ ಜನಪ್ರಿಯಗೊಂಡಿರುವ ಕ್ರಿಕೆಟ್ ಆಟದ ಮೂಲಕ ಒನ್ ವರ್ಲ್ಡ್, ಒನ್ ಪ್ಯಾಮಿಲಿ ಪರಿಕಲ್ಪನೆಯಡಿ ಬರುತ್ತಿದ್ದೇವೆ'' ಎಂದರು.
''ಸಮಾಜದ ಸಮಸ್ಯೆಗಳಿಗೆ ಕ್ರಿಕೆಟ್ ಮೂಲಕ ಪರಿಹಾರ ಕಂಡುಕೊಳ್ಳುವ ಪ್ರಯತ್ನವಾಗುತ್ತಿರುವುದು ಖುಷಿ ತಂದಿದೆ. ಶ್ರೀ ಮಧುಸೂಧನ್ ಸಾಯಿ ಮಾತನಾಡಿ ಒನ್ ವರ್ಲ್ಡ್ ಒನ್ ನೇಷನ್ಗೆ ಪರಿಕಲ್ಪನೆಗೆ ಸುನಿಲ್ ಗವಾಸ್ಕರ್ ಅವರು ಕೈ ಜೋಡಿಸಿರುವುದು ಖುಷಿತಂದಿದೆ. ಸದ್ದುದ್ದೇಶದಿಂದ ಕೂಡಿರುವ ಪಂದ್ಯ ಆಯೋಜಿಸಿ ಸಮಾಜದ ಉದ್ದಾರಕ್ಕೆ ಕೈ ಹಾಕಿರುವುದು ಇದು ಅವರ ಜೀವನದ ಮೂರನೇ ಇನ್ಸಿಂಗ್ ಆಗಿದೆ. ಒಂದು ಜಗತ್ತು, ಒಂದೇ ಕುಟುಂಬದ ಸಂದೇಶ ಸಾರುವುದೇ ಕ್ರಿಕೆಟ್ ಪಂದ್ಯ ಆಯೋಜನೆ ಹಿಂದಿನ ತಿರುಳಾಗಿದೆ'' ಎಂದು ಗವಾಸ್ಕರ್ ಹೇಳಿದರು.