ಚಿಕ್ಕಬಳ್ಳಾಪುರ: ಸೋತವರಿಗೂ ಸಚಿವ ಸ್ಥಾನ ನೀಡಬೇಕೆಂದು ಯಡಿಯೂರಪ್ಪನವರನ್ನು ಅನರ್ಹ ಶಾಸಕರು ಬ್ಲ್ಯಾಕ್‌ಮೇಲ್ ಮಾಡುತ್ತಿದ್ದಾರೆ. ಅವರು ಎಲ್ಲಿ ಹೋದರು ಬ್ಲ್ಯಾಕ್‌ಮೇಲ್ ಗಿರಾಕಿಗಳೇ ಎಂದು ಬಿಜೆಪಿ ಸರ್ಕಾರ ರಚನೆಗೆ ಪ್ರಮುಖ ಕಾರಣರಾದ 15 ಜನರ ವಿರುದ್ಧ ಮಾಜಿ ಶಾಸಕ ಶಿವಶಂಕರ್ ರೆಡ್ಡಿ ವಾಗ್ದಾಳಿ ನಡೆಸಿದ್ದಾರೆ.
ಈ 15 ಜನರು ಎಲ್ಲಿ ಹೋದರೂ ಬ್ಲ್ಯಾಕ್‌ಮೇಲ್ ಗಿರಾಕಿಗಳೇ.. ಶಿವಶಂಕರ್ ರೆಡ್ಡಿ ವಾಗ್ದಾಳಿ - ಶಿವಶಂಕರ್ ರೆಡ್ಡಿ ವಾಗ್ದಾಳಿ
ಬಿಜೆಪಿ ಸರ್ಕಾರ ರಚನೆಗೆ ಪ್ರಮುಖ ಕಾರಣರಾದ 15 ಜನರ ವಿರುದ್ಧ ಮಾಜಿ ಶಾಸಕ ಶಿವಶಂಕರ್ ರೆಡ್ಡಿ ವಾಗ್ದಾಳಿ ನಡೆಸಿದ್ದಾರೆ. ಅನರ್ಹ ಶಾಸಕರು ಎಲ್ಲಿ ಹೋದರು ಬ್ಲ್ಯಾಕ್‌ಮೇಲ್ ಗಿರಾಕಿಗಳೇ ಎಂದು ಅವರು ಆರೋಪಿಸಿದ್ದಾರೆ.
ಸರ್ಕಾರ ಕಳೆದ 6 ತಿಂಗಳಿನಿಂದ ಕೇವಲ ಆಡಳಿತ ಉಳಿಸಿಕೊಳ್ಳುವ ಪ್ರಯತ್ನ ಮಾಡುತ್ತಿದೆ. ನೆರೆ ಸಂತ್ರಸ್ತರಿಗೆ ಯಾವುದೇ ಸಹಾಯ ಮಾಡಲು ಸರ್ಕಾರ ವಿಫಲವಾಗಿದೆ ಎಂದು ಸರ್ಕಾರದ ವಿರುದ್ಧ ಅವರು ಕಿಡಿಕಾರಿದರು.
ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಪೌರತ್ವ ಮಸೂದೆ ಕಾಯ್ದೆ ಬಗ್ಗೆ ಪ್ರತಿಕ್ರಿಯಿಸಿದ ಅವರು, ಈ ಮಸೂದೆಯಿಂದ ಆತಂಕ ಶುರುವಾಗಿದೆ. ಅಲ್ಪಸಂಖ್ಯಾತರನ್ನ ತೊಂದರೆಗೆ ಸಿಲುಕಿಸಲಾಗುತ್ತಿದೆ. ಮುಸ್ಲಿಮರನ್ನ ತೊಂದರೆಗೆ ಗುರಿಮಾಡಲು ಈ ಬಿಲ್ ಪಾಸ್ ಮಾಡಲಾಗಿದೆ. ಎನ್ಆರ್ಸಿಯಿಂದ ಹಲವು ಕೋಮುಗಳಿಗೆ ಪೌರತ್ವ ಸಿಗಲಿಲ್ಲ. ಮುಸಲ್ಮಾರಿಗೆ ಈ ದೇಶದಲ್ಲಿ ನೆಲೆ ಇಲ್ಲ. ಜಾತ್ಯಾತೀತ ತತ್ವಕ್ಕೆ, ದೇಶಕ್ಕೆ ಮುಂದಿನ ದಿನಗಳಲ್ಲಿ ಇದು ಮಾರಕ. ಹಲವು ರಾಜ್ಯಗಳು ಇದರ ವಿರುದ್ಧವಿದ್ದು, ದೇಶದಾದ್ಯಂತ ಪ್ರತಿಭಟನೆ ನಡೆಯುತ್ತಿದೆ ಎಂದು ತಿಳಿಸಿದರು.