ಚಿಕ್ಕಬಳ್ಳಾಪುರ :ಒಂದೇ ಗ್ರಾಮದ ಐವತ್ತಕ್ಕೂ ಹೆಚ್ಚು ಮಂದಿ ವಾಂತಿ ಹಾಗೂ ಬೇಧಿಯಿಂದ ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ಜಿಲ್ಲೆಯ ರೆಡ್ಡಿಗೊಲ್ಲವಾರಹಳ್ಳಿಯಲ್ಲಿ ನಡೆದಿದೆ.
ಭಾನುವಾರ ರೆಡ್ಡಿಗೊಲ್ಲವಾರಹಳ್ಳಿ ಪಕ್ಕದ ಬಯಪ್ಪನಹಳ್ಳಿ ಗ್ರಾಮದ ಗುರುಪ್ರಸಾದ್ ಎಂಬುವರ ಮನೆಯಲ್ಲಿ ನಾಮಕರಣ ಮಹೋತ್ಸವ ಇತ್ತು. ಕಾರ್ಯಕ್ರಮ ಮುಗಿದ ನಂತರ ಸಂಜೆ ಉಳಿದಿದ್ದ ಊಟವನ್ನು ರೆಡ್ಡಿಗೊಲ್ಲವಾರಹಳ್ಳಿಯ ಹಲವರು ಊಟವನ್ನು ಮನೆಗೆ ತೆಗೆದುಕೊಂಡು ಹೋಗಿ ಸೇವಿಸಿದ್ದರು ಎನ್ನಲಾಗಿದೆ.