ಚಿಕ್ಕಬಳ್ಳಾಪುರ:ನಗರದ ಸರ್ ಎಂವಿ ಕ್ರೀಡಾಂಗಣದಲ್ಲಿ ಇದೇ 15-16 ರಂದು ಸಿರಿಧಾನ್ಯಗಳ ಹಬ್ಬ ಹಾಗೂ ಫಲಪುಷ್ಪ ಪ್ರದರ್ಶನವನ್ನು ಜಿಲ್ಲಾಡಳಿತ ಆಯೋಜನೆ ಮಾಡಲಾಗಿದ್ದು, ಕಾರ್ಯಕ್ರಮಕ್ಕೆ ಭರ್ಜರಿ ತಯಾರಿ ನಡೆಸಲಾಗುತ್ತಿದೆ.
ಚಿಕ್ಕಬಳ್ಳಾಪುರ: ಸಿರಿಧಾನ್ಯಗಳ ಮೇಳ, ಫಲಪುಷ್ಪ ಪ್ರದರ್ಶನಕ್ಕೆ ಸಕಲ ಸಿದ್ಧತೆ - ಸಿರಿಧಾನ್ಯಗಳ ಮೇಳ ಹಾಗೂ ಫಲಪುಷ್ಪ ಪ್ರದರ್ಶನ
ಚಿಕ್ಕಬಳ್ಳಾಪುರದಲ್ಲಿ ಜಿಲ್ಲಾಡಳಿತ ವತಿಯಿಂದ ಇದೇ 15-16 ರಂದು ಸಿರಿಧಾನ್ಯಗಳ ಹಬ್ಬ ಹಾಗೂ ಫಲಪುಷ್ಪ ಪ್ರದರ್ಶನವನ್ನು ಆಯೋಜನೆ ಮಾಡಲಾಗಿದೆ.
![ಚಿಕ್ಕಬಳ್ಳಾಪುರ: ಸಿರಿಧಾನ್ಯಗಳ ಮೇಳ, ಫಲಪುಷ್ಪ ಪ್ರದರ್ಶನಕ್ಕೆ ಸಕಲ ಸಿದ್ಧತೆ ಸಕಲ ಸಿದ್ದತೆ](https://etvbharatimages.akamaized.net/etvbharat/prod-images/768-512-6071291-thumbnail-3x2-hjghjg.jpg)
ಸಕಲ ಸಿದ್ದತೆ
ಸಿರಿಧಾನ್ಯಗಳ ಮೇಳ ಹಾಗೂ ಫಲಪುಷ್ಪ ಪ್ರದರ್ಶನದ ಕುರಿತು ಸುದ್ಧಿಗೋಷ್ಠಿ
ಮೇಳದಲ್ಲಿ ರಂಗನಾಥ ಸ್ವಾಮಿ, ಹಂಪಿಯ ಕಲ್ಲಿನ ರಥ, ಸುಭಾಷ್ ಚಂದ್ರಬೋಸ್, ವಿವೇಕನಂದರ ಮಣ್ಣಿನ ಪುತ್ಥಳಿ ನಿರ್ಮಿಸಲಾಗುತ್ತಿದೆ. ಇನ್ನೂ ಸಿರಿಧಾನ್ಯಗಳ ಮೇಳ, ರಂಗೋಲಿ ಸ್ಪರ್ಧೆ, ಗುಂಡು ಎತ್ತುವುದು, ರಾಗಿ ಮುದ್ದೆ ತಿನ್ನುವ ಸ್ಪರ್ಧೆ, ವೇಷಭೂಷಣ ಸ್ಪರ್ಧೆ, ಮಕ್ಕಳಿಗೆ ಚಿತ್ರಕಲೆ ಸ್ಪರ್ಧೆ, ಸೆಲ್ಪಿ ಬೂತ್, ಸಾಧಕರಿಗೆ ಸನ್ಮಾನ, ಸಸಿಗಳ ಪ್ರದರ್ಶನ, ಎತ್ತು, ಕುರಿ ಮತ್ತು ಮೇಕೆ ತಳಿಗಳ ಪ್ರದರ್ಶನ, ಮೀನು ಮಾರಾಟ, ಶ್ವಾನ ಪ್ರದರ್ಶನ ಸೇರಿದಂತೆ ಹಲವು ರೀತಿಯ ಆಕರ್ಷಕ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದೆ.