ಕರ್ನಾಟಕ

karnataka

ETV Bharat / state

ಲಂಚ ಸ್ವೀಕರಿಸಿದ ಐವರು ಪಿಡಿಒಗಳ ಅಮಾನತು - ಗುಡಿಬಂಡೆ ತಾಲೂಕಿನ ಎಲ್ಲೋಡು ಗ್ರಾಮ ಪಂಚಾಯಿತಿ

ಓಎಫ್​ಸಿ‌ ಕೇಬಲ್‌ ‌ಅಳವಡಿಕೆಗೆ ಅನುಮತಿ ಪಡೆಯುವ ವಿಚಾರದಲ್ಲಿ ಲಂಚ ಸ್ವೀಕರಿಸಿದ ಪಿಡಿಒಗಳ ಅಮಾನತು ಮಾಡಲಾಗಿದೆ.

Kn_ckb_
ಲಂಚ ಸ್ವೀಕರಿಸಿದ ಐವರು ಪಿಡಿಒಗಳ ಅಮಾನತು

By

Published : Nov 5, 2022, 9:00 PM IST

ಚಿಕ್ಕಬಳ್ಳಾಪುರ: ಲಂಚ ಸ್ವೀಕರಿಸಿದ ವಿಡಿಯೋಗಳು ಖಾಸಗಿ ಸುದ್ದಿ ವಾಹಿನಿಯಲ್ಲಿ ಪ್ರಸಾರವಾದ ಹಿನ್ನೆಲೆ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶಿವಶಂಕರ್ ಅವರು ಎರಡು ತಾಲೂಕಿನ 5 ಮಂದಿ ಪಿಡಿಒಗಳನ್ನು ತಕ್ಷಣದಿಂದ ಜಾರಿ ಬರುವಂತೆ‌ ಅಮಾನತು ಮಾಡಿ ಆದೇಶಿಸಿದ್ದಾರೆ.

ಓಎಫ್​ಸಿ‌ ಕೇಬಲ್‌ ‌ಅಳವಡಿಕೆಗೆ ಅನುಮತಿ ಪಡೆಯುವ ವಿಚಾರದಲ್ಲಿ ಗುಡಿಬಂಡೆ ತಾಲೂಕಿನ ಎಲ್ಲೋಡು ಗ್ರಾಮ ಪಂಚಾಯಿತಿ ಪಿಡಿಒ ಡಿ.ಎಸ್.ಮಂಜುನಾಥ್, ಬೀಚಗಾನಹಳ್ಳಿ ಪಿಡಿಒ ಎಂ.ಎನ್.ಬಾಲಕೃಷ್ಣ ಹಾಗೂ ಸೋಮೇನಹಳ್ಳಿ ಪಿಡಿಒ ಎನ್.ವೆಂಕಟಾಚಲಪತಿ ಹಾಗೂ ಬಾಗೇಪಲ್ಲಿ ತಾಲೂಕಿನ ಎ.ಗೌಸ್ ಪೀರ್, ಚೇಳೂರು ಪಂಚಾಯತ್ ಪಿಡಿಒ ಹಾಗೂ ಬಾಬುಸಾಹೇಬ್ ಗೂಳೂರು ಪಂಚಾಯತ್ ಪಿಡಿಒ ಲಂಚ ಪಡೆಯುತ್ತಿರುವುದು ಖಾಸಗಿ ಸುದ್ದಿ ವಾಹಿನಿಯಲ್ಲಿ ಪ್ರಸಾರವಾಗಿದ್ದು, ಮೇಲ್ನೋಟಕ್ಕೆ ಅವರು ಲಂಚ ಸ್ವೀಕರಿಸಿರುವುದು ಕಂಡುಬಂದಿದೆ.

ಅವರು ಕರ್ನಾಟಕ ನಾಗರೀಕ ಸೇವಾ ನಡತೆ ನಿಯಮ‌ ಉಲ್ಲಂಘಿಸಿದ್ದು, ಕೂಡಲೇ ಅವರನ್ನು ವಿಚಾರಣೆಗೆ ಕಾಯ್ದಿರಿಸಿ ತಕ್ಷಣದಿಂದಲೇ ಅಮಾನತು ಜಾರಿಗೆ ಬರುವಂತೆ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶಿವಶಂಕರ್ ಆದೇಶಿಸಿದ್ದಾರೆ.

ಇದನ್ನೂ ಓದಿ:ಅಲೋಕ್ ಕುಮಾರ್ ಯಾರು?.. ಪೊಲೀಸರ ಜೊತೆಗೆ ಶಾಸಕ ರೇಣುಕಾಚಾರ್ಯ ವಾಗ್ವಾದ ... ವಿಡಿಯೋ!

ABOUT THE AUTHOR

...view details