ಚಿಕ್ಕಬಳ್ಳಾಪುರ:ಜಿಲ್ಲೆಗೆ ಮತ್ತೆ ಕೊರೊನಾ ಕಂಟಕ ಶುರುವಾಗಿದ್ದು, ಇಂದು ಐದು ಜನರಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ.
ಮಹಾರಾಷ್ಟ್ರದಿಂದ ಜಿಲ್ಲೆಗೆ ಬಂದಿರುವ ವಲಸೆ ಕಾರ್ಮಿಕರಲ್ಲಿ ಇಬ್ಬರಿಗೆ ಹಾಗೂ ತಮಿಳುನಾಡು ಮೂಲದ ಒಬ್ಬರಿಗೆ ಮತ್ತು ಜಿಲ್ಲೆಯ ಯಾವುದೇ ಸೋಂಕಿತರ ಸಂಪರ್ಕವಿಲ್ಲದ ಇಬ್ಬರಿಗೆ ಸೇರಿದಂತೆ ಐವರಿಗೆ ಕೊರೊನಾ ಪಾಸಿಟಿವ್ ಇರುವುದು ದೃಢಪಟ್ಟಿದೆ.
ರೋಗಿ ಸಂಖ್ಯೆ-8501, 25 ವರ್ಷದ ತಮಿಳುನಾಡಿನಿಂದ ಬಂದಿದ್ದ ಯುವಕ, ಮಹಾರಾಷ್ಟ್ರದ ವಲಸೆ ಕಾರ್ಮಿಕರಾದ ರೋಗಿ ಸಂಖ್ಯೆ- 8502, 15 ವರ್ಷದ ಬಾಲಕ, ರೋಗಿ ಸಂಖ್ಯೆ-8503, 27 ವರ್ಷದ ಯುವಕ ಮತ್ತು ನಗರದ ರೋಗಿ ಸಂಖ್ಯೆ-8504, 27 ವರ್ಷದ ಯುವಕ, ರೋಗಿ ಸಂಖ್ಯೆ- 8505, 17 ವರ್ಷದ ಯುವಕನಲ್ಲಿ ಸೋಂಕು ಪತ್ತೆಯಾಗಿದೆ. ನಗರದ ಯುವಕರ ಸೋಂಕಿನ ಮೂಲವನ್ನು ಪತ್ತೆ ಮಾಡಲಾಗುತ್ತಿದೆ.
ಜಿಲ್ಲೆಯಲ್ಲಿ ಒಟ್ಟು 163 ಸೋಂಕಿತ ಪ್ರಕರಣಗಳಿದ್ದು, ಇಬ್ಬರು ಕೋವಿಡ್ನಿಂದ ಮತ್ತು ಮತ್ತೊಬ್ಬರು ಅನ್ಯ ಕಾರಣದಿಂದ ಮೃತಪಟ್ಟಿದ್ದಾರೆ. 147 ಜನ ಸಂಪೂರ್ಣ ಗುಣಮುಖರಾಗಿದ್ದಾರೆ.