ಚಿಕ್ಕಬಳ್ಳಾಪುರ:ಜಿಲ್ಲೆಯ ಚಿಂತಾಮಣಿ ತಾಲೂಕಿನ ಅಂಬಾಜೀ ದುರ್ಗಾದ ಸುಮಾರು 10 ಎಕರೆ ಬೆಟ್ಟದಲ್ಲಿ ಬೆಂಕಿ ಆವರಿಸಿಕೊಂಡಿದ್ದು, ಬೆಂಕಿಯ ಕೆನ್ನಾಲಿಗೆಗೆ ಬೆಟ್ಟ ಹೊತ್ತಿ ಉರಿದಿದೆ.
ಬೆಟ್ಟಕ್ಕೆ ಬೆಂಕಿ: ಸುಮಾರು 10 ಎಕರೆ ಮರಗಿಡಗಳು ಸುಟ್ಟು ಭಸ್ಮ - Chikkaballapur news
ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲೂಕಿನ ಅಂಬಾಜೀ ದುರ್ಗಾದ ಸುಮಾರು 10 ಎಕರೆ ಬೆಟ್ಟದಲ್ಲಿ ಬೆಂಕಿ ಆವರಿಸಿಕೊಂಡಿದ್ದು, ಬೆಂಕಿಯ ಕೆನ್ನಾಲಿಗೆಗೆ ಬೆಟ್ಟ ಹೊತ್ತಿ ಉರಿದಿದೆ.

ಬೆಟ್ಟಕ್ಕೆ ಬೆಂಕಿ: ಸುಮಾರು 10 ಎಕರೆ ಮರಗಿಡಗಳು ಸುಟ್ಟು ಭಸ್ಮ
ತಾಲೂಕಿನ ಕೋನಪಲ್ಲಿಯಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ನಂತರ ಉಪ್ಪರಪೇಟೆ ಗ್ರಾಮದವರೆಗೂ ಬೆಂಕಿಯ ಕಿನ್ನಾಲಿಗೆ ಆವರಿಸಿಕೊಂಡಿದೆ. ಸದ್ಯ ಬೆಟ್ಟಕ್ಕೆ ಬೆಂಕಿ ಬಿದ್ದ ಹಿನ್ನೆಲೆ ಸುತ್ತಲಿನ ಗ್ರಾಮಗಳು ದಟ್ಟ ಹೊಗೆಯಿಂದ ತುಂಬಿಕೊಂಡಿವೆ.
ಈ ಬಗ್ಗೆ ಗ್ರಾಮಸ್ಥರು ಅರಣ್ಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದು, ಕಿಡಿಗೇಡಿಗಳ ಕೃತ್ಯದಿಂದ ಬೆಂಕಿ ಬಿದ್ದಿರುವ ಶಂಕೆ ವ್ಯಕ್ತವಾಗಿದೆ.