ಕರ್ನಾಟಕ

karnataka

ETV Bharat / state

ಬಣವೆಗೆ ಬೆಂಕಿ ಹಚ್ಚಿದ ಕಿಡಿಗೇಡಿಗಳು: ಲಕ್ಷ ರೂ. ಮೌಲ್ಯದ ಹುಲ್ಲು ಭಸ್ಮ - Fire on grass

ಹಾಡು ಹಗಲಲ್ಲೇ ಕಿಡಿಗೇಡಿಗಳು ಹುಲ್ಲಿನ ಬಣವೆಗೆ ಬೆಂಕಿ ಹಚ್ಚಿದ್ದು, ಸುಮಾರು 1 ಲಕ್ಷಕ್ಕೂ ಹೆಚ್ಚು ಮೌಲ್ಯದ ಹುಲ್ಲು ನಾಶವಾಗಿದೆ. ಇದರಿಂದಾಗಿ ನಮಗೆ ದಿಕ್ಕು ತೋಚದಂತಾಗಿದೆ ಎಂದು ರೈತ ತಮ್ಮ ಅಳಲು ತೋಡಿಕೊಂಡಿದ್ದಾರೆ.

Fire on grass
Fire on grass

By

Published : Jun 16, 2020, 9:59 PM IST

ಬಾಗೇಪಲ್ಲಿ: 5 ಲೋಡ್ ಹುಲ್ಲಿನ ಬಣವೆಗೆ ಕಿಡಿಗೇಡಿಗಳು ಬೆಂಕಿ ಹಚ್ಚಿ ಪರಾರಿಯಾಗಿರುವ ಘಟನೆ ಜಿಲ್ಲೆಯ ಬಾಗೇಪಲ್ಲಿ ತಾಲೂಕಿನ ಆಂಧ್ರದ ಗಡಿಭಾಗದಲ್ಲಿ ಇರುವ ಕೊತ್ತಪಲ್ಲಿ ಗ್ರಾಮದಲ್ಲಿ ನಡೆದಿದೆ.

ಸುಟ್ಟು ಕರಕಲಾಗಿರುವ ಹುಲ್ಲಿನ ಬಣವೆ ಗ್ರಾಮದ ನಾರಾಯಣಸ್ವಾಮಿ ಎಂಬುವವರಿಗೆ ಸೇರಿದ್ದು ಎಂದು ತಿಳಿದು ಬಂದಿದೆ. ಇವರು ಹಸುಗಳನ್ನು ಮೇಯಿಸಿಕೊಂಡು ಜೀವನ ಸಾಗಿಸುತ್ತಿದ್ದು, ಸದ್ಯ ಈ‌ ಘಟನೆ ನಡೆದಿದೆ.

ಇನ್ನೂ ತಾಲೂಕಿನ ಅಗ್ನಿಶಾಮಕದಳ ಸ್ಥಳಕ್ಕೆ ಆಗಮಿಸಿ ಸುಮಾರು 2 ಘಂಟೆಗಳಿಗೂ ಹೆಚ್ಚು ಸಮಯವನ್ನು ಅಗ್ನಿಯನ್ನು ನಂದಿಸಲು ಹರಸಾಹಸ ಪಟ್ಟರು.

ABOUT THE AUTHOR

...view details