ಗುಡಿಬಂಡೆ :ತಾಲೂಕಿನ ಐತಿಹಾಸಿಕ ಹಿನ್ನೆಲೆಯುಳ್ಳ ಎಲ್ಲೋಡು ಆದಿನಾರಾಯಣಸ್ವಾಮಿ ಬೆಟ್ಟಕ್ಕೆ ಕಳೆದ ರಾತ್ರಿ ಬೆಂಕಿ ಬಿದ್ದಿದ್ದು, ಅಪಾರ ಪ್ರಮಾಣದ ಜೀವರಾಶಿ ಹಾಗೂ ಅಪರೂಪದ ಸಸ್ಯ ಸಂಕುಲ ಬೆಂಕಿಗೆ ಆಹುತಿಯಾಗಿದೆ.
ಎಲ್ಲೋಡು ಬೆಟ್ಟಕ್ಕೆ ಬೆಂಕಿ.. ಅಪಾರ ಪ್ರಮಾಣದ ಜೀವರಾಶಿ ನಾಶ - enormous amount of biomass
ಸೀಗರೇಟು ಸೇದಿ ಬೆಟ್ಟದ ಭಾಗದಲ್ಲಿ ಬೀಸಾಡಿರಬಹುದು ಎಂದು ಸ್ಥಳೀಯರು ಆರೋಪಿಸಿದ್ದಾರೆ. ಈ ಸಂಬಂಧ ತನಿಖೆ ನಡೆಯುತ್ತಿದ್ದು, ಕಿಡಿಗೇಡಿಗಳಿಗಾಗಿ ಹುಡಕಾಟ ಮುಂದುವರೆದಿದೆ..

ಜೀವರಾಶಿ ನಾಶ
ಬೆಟ್ಟದಲ್ಲಿ ಕಳೆದ ರಾತ್ರಿ ಸುಮಾರು 9.30ರ ಸಮಯದಲ್ಲಿ ಬೆಂಕಿ ಕಾಣಿಸಿದೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕಾಗಮಿಸಿದ ಅರಣ್ಯ ಇಲಾಖೆ ಹಾಗೂ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಲು ಶ್ರಮಿಸಿದರಾದರೂ, ಆ ವೇಳೆಗಾಗಲೇ ಅಪಾರ ಜೀವರಾಶಿಗಳು ಹಾಗೂ ಅಪರೂಪದ ಸಸ್ಯರಾಶಿ ಬೆಂಕಿಗಾಹುತಿಯಾಗಿದೆ.
ರಾತ್ರಿ ವೇಳೆ ಬೆಟ್ಟದ ವ್ಯಾಪ್ತಿಯಲ್ಲಿ ಕುಡಿಯುವುದು, ಧೂಮಪಾನ ಮಾಡುವುದು ಸಾಮಾನ್ಯವಾಗಿದೆ. ಸೀಗರೇಟು ಸೇದಿ ಬೆಟ್ಟದ ಭಾಗದಲ್ಲಿ ಬೀಸಾಡಿರಬಹುದು ಎಂದು ಸ್ಥಳೀಯರು ಆರೋಪಿಸಿದ್ದಾರೆ. ಈ ಸಂಬಂಧ ತನಿಖೆ ನಡೆಯುತ್ತಿದ್ದು, ಕಿಡಿಗೇಡಿಗಳಿಗಾಗಿ ಹುಡಕಾಟ ಮುಂದುವರೆದಿದೆ.