ಕರ್ನಾಟಕ

karnataka

ETV Bharat / state

ಕುರಿ ದೊಡ್ಡಿಗೆ ಬೆಂಕಿ ಇಟ್ಟ ಕಿಡಿಗೇಡಿಗಳು! 190 ಕುರಿಗಳು ಸಜೀವ ದಹನ - Fire attack on sheep hutch

ಕಿಡಿಗೇಡಿಗಳು ಕುರಿ ದೊಡ್ಡಿಗೆ ಬೆಂಕಿ ಹಚ್ಚಿದ ಪರಿಣಾಮ ದೊಡ್ಡಿಯಲ್ಲಿದ್ದ 190 ಕುರಿಗಳು ಬೆಂಕಿಗೆ ಆಹುತಿಯಾಗಿರುವ ದಾರುಣ ಘಟನೆ ನಡೆದಿದೆ.

ಕುರಿ ದೊಡ್ಡಿಗೆ ಬೆಂಕಿ

By

Published : Sep 15, 2019, 1:57 PM IST

ಚಿಕ್ಕಬಳ್ಳಾಪುರ:ಕಿಡಿಗೇಡಿಗಳು ಕುರಿ ದೊಡ್ಡಿಗೆ ಬೆಂಕಿ ಹಚ್ಚಿದ ಪರಿಣಾಮ 190 ಕುರಿಗಳು ಸುಟ್ಟು ಭಸ್ಮವಾದ ದಾರುಣ ಘಟನೆ ಜಿಲ್ಲೆಯ ಬಾಗೇಪಲ್ಲಿ ತಾಲೂಕಿನ ಕಾಳಪ್ಪರಾಳ್ಳಪಲ್ಲಿ ಗ್ರಾಮದಲ್ಲಿ ನಡೆದಿದೆ.

ಕಾಳಪ್ಪರಾಳ್ಳಪಲ್ಲಿ ಗ್ರಾಮದ ಈಶ್ವರಪ್ಪ ಎಂಬವರಿಗೆ ಸೇರಿದ ಕುರಿಗಳು ಇದಾಗಿವೆ. ತಡರಾತ್ರಿ ಕುರಿಗಳ ದೊಡ್ಡಿಗೆ ಕಿಡಿಗೇಡಿಗಳು ಬೆಂಕಿ ಹಚ್ಚಿದ್ದಾರೆ. ಪರಿಣಾಮ ದೊಡ್ಡಿಯಲ್ಲಿತದ್ದ190 ಕುರಿಗಳು ಬೆಂಕಿಗಾಹುತಿಯಾಗಿವೆ. ಸುಮಾರು 15 ಲಕ್ಷ ರೂಗೂ ಹೆಚ್ಚು ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ. ಜೊತೆಗೆ ಈಶ್ವರಪ್ಪನವರು ಕೃಷಿಗೆ ಬಳಸುತ್ತಿರುವ ಸಲಕರಣೆಗಳು ಕೂಡಾ ಸುಟ್ಟುಹೋಗಿವೆ ಎಂದು ತಿಳಿದುಬಂದಿದೆ.

ಚೇಳೂರು ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಪ್ರಕರಣ ದಾಖಲಾಗಿದೆ.

ABOUT THE AUTHOR

...view details