ಚಿಕ್ಕಬಳ್ಳಾಪುರ:ಅಪಾರ ಪ್ರಮಾಣದ ಟೊಮೊಟೊ ಬಾಕ್ಸ್‌ಗಳು ಬೆಂಕಿಯಲ್ಲಿ ಬೆಂದುಹೋದ ಘಟನೆ ಜಿಲ್ಲೆಯ ಚಿಂತಾಮಣಿ ನಗರದ ಕರಿಂಪಲ್ಲಿ ಬಳಿ ನಡೆದಿದೆ.
ಚಾಂದ್ ಪಾಷಾ ಎಂಬುವರಿಗೆ ಸೇರಿದ ಗೋಡೌನ್ನಲ್ಲಿ ಚೌಡರೆಡ್ಡಿ, ಆನಂದ್, ಮಂಜುನಾಥ್ ಅವರು ಸುಮಾರು ವರ್ಷಗಳಿಂದ ಟೊಮೊಟೊ ಬಾಕ್ಸ್ಗಳನ್ನು ಬಾಡಿಗೆಗಿಟ್ಟು ಬಳಿಕ ಮಾರುಕಟ್ಟೆಗೆ ರವಾನಿಸುತ್ತಿದ್ದರು. ಕಳೆದ ವಾರ ಇದೇ ಗೋಡೌನ್ಗೆ ಬೆಂಕಿ ತಗುಲಿ ಲಕ್ಷಾಂತರ ಮೌಲ್ಯದ ಟೊಮೆಟೊ ಬಾಕ್ಸ್ ಸುಟ್ಟು ಭಸ್ಮವಾಗಿದ್ದವು. ಇದೀಗ ಮತ್ತೆ ಬೆಂಕಿ ಕಾಣಿಸಿಕೊಂಡಿದ್ದು ಸಾಕಷ್ಟು ನಷ್ಟ ಸಂಭವಿಸಿದೆ.