ಚಿಕ್ಕಬಳ್ಳಾಪುರ: ಕೊರೊನಾದಿಂದ ಬೆಳೆದ ಬೆಳೆಗೆ ಸೂಕ್ತ ಬೆಲ ಸಿಗದ ಹಿನ್ನೆಲೆ ರೈತನೊಬ್ಬ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಚಿಕ್ಕಬಳ್ಳಾಪುರ ತಾಲೂಕಿನ ಕತ್ತರಿಗುಪ್ಪೆ ಗ್ರಾಮದಲ್ಲಿ ನಡೆದಿದೆ.
ಹೂವಿಗೆ ಸೂಕ್ತ ಬೆಲ ಸಿಗದ ಹಿನ್ನೆಲೆ ವಿಷ ಸೇವಿಸಿದ ರೈತ
ಲಾಕ್ಡೌನ್ ಹಿನ್ನೆಲೆ ತಾನು ಬೆಳೆದ ಬೆಳೆಗೆ ಸೂಕ್ತ ಬೆಲೆ ಸಿಗದಿರುವುದಕ್ಕೆ ಮನನೊಂದ ರೈತನೊಬ್ಬ ಕತ್ತರಿಗುಪ್ಪೆ ಗ್ರಾಮದಲ್ಲಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಆತ್ಮಹತ್ಯೆ ಮಾಡಿಕೊಂಡ ರೈತ
ರಾಮಪ್ಪ (55) ತೋಟದಲ್ಲಿ ವಿಷ ಸೇವಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡ ರೈತ ಎಂದು ತಿಳಿದು ಬಂದಿದೆ. ರಾಮಪ್ಪ ತನ್ನ ಮೂರು ಎಕರೆ ಪ್ರದೇಶದಲ್ಲಿ ಸಾಲ ಮಾಡಿ ಹೂವು ಬೆಳೆದಿದ್ದ. ಲಾಕ್ಡೌನ್ ಪರಿಣಾಮ ಸೂಕ್ತ ಬೆಲೆ ಸಿಗದೇ ಮನನೊಂದು ತನ್ನ ಹೊಲದಲ್ಲೇ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ತಿಳಿದು ಬಂದಿದೆ. ಇಲ್ಲಿನ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.