ಕರ್ನಾಟಕ

karnataka

ETV Bharat / state

ಚಿಕ್ಕಬಳ್ಳಾಪುರದಲ್ಲಿ ನಕಲಿ ಮದ್ಯ ತಯಾರಿಕಾ ಘಟಕ ಸೀಜ್.. ಓರ್ವನ ಬಂಧನ - Fake Liquor Siege

ಅಕ್ರಮ ಮದ್ಯ ತಯಾರಿಸುತ್ತಿದ್ದ ಘಟಕದ ಮೇಲೆ ದಾಳಿ ನಡೆಸಿ 10 ಲಕ್ಷ ರೂಪಾಯಿಗೂ ಅಧಿಕ ಮೌಲ್ಯದ ಸರಕನ್ನು ಅಬಕಾರಿ ಅಧಿಕಾರಿಗಳು ವಶಪಡಿಸಿಕೊಂಡಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ತಾದೂರಿನಲ್ಲಿ ನಡೆದಿದೆ.

saxd
ಚಿಕ್ಕಬಳ್ಳಾಪುರದಲ್ಲಿ 10 ಲಕ್ಷ ರೂಪಾಯಿಗೂ ಹೆಚ್ಚು ನಕಲಿ ಮದ್ಯ ಸೀಜ್​

By

Published : Jan 17, 2021, 4:31 PM IST

ಚಿಕ್ಕಬಳ್ಳಾಪುರ: ನಕಲಿ ಮದ್ಯ ಮಾರಾಟ ಮಾಡುತ್ತಿದ್ದ ಅಂಗಡಿಗಳ ಮೇಲೆ ಕಾರ್ಯಾಚರಣೆ ನಡೆಸಿ 10 ಲಕ್ಷ ರೂಪಾಯಿಗೂ ಅಧಿಕ ಮೌಲ್ಯದ ಸರಕು ಸರಂಜಾಮುಗಳನ್ನು ವಶಪಡಿಸಿಕೊಂಡಿರುವ ಘಟನೆ ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ತಾದೂರಿನಲ್ಲಿ ನಡೆದಿದೆ.

ತಾದೂರು ಗ್ರಾಮದ ರೇಷ್ಮೆ ಶೆಡ್​ನಲ್ಲಿ ನಕಲಿ ಮದ್ಯ ತಯಾರಿಸಿ ವಿವಿಧ ಬ್ರ್ಯಾಂಡ್​ಗಳ ಲೇಬಲ್ ಹಾಕಿ ಮದ್ಯ ತಯಾರಿಕಾ ಘಟಕವನ್ನೇ ತಯಾರಿಸಿದ್ದರು. ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಜಿಲ್ಲಾ ಅಬಕಾರಿ ಅಧಿಕಾರಿಗಳು 37,800 ಲೀಟರ್ ನಕಲಿ ಮದ್ಯ ಹಾಗೂ 1290 ಲೀಟರ್ ಸ್ಪಿರಿಟ್ ಜಪ್ತಿ ಮಾಡಿ ಆರೋಪಿ ಟಿ.ಎಂ. ಮಂಜುನಾಥ್​ನನ್ನು ಬಂಧಿಸಿದ್ದಾರೆ.

ಚಿಕ್ಕಬಳ್ಳಾಪುರದಲ್ಲಿ 10 ಲಕ್ಷ ರೂಪಾಯಿಗೂ ಹೆಚ್ಚು ನಕಲಿ ಮದ್ಯ ಸೀಜ್​

ವಿವಿಧ ಬ್ರ್ಯಾಂಡ್​ಗಳ ನಕಲಿ ಮದ್ಯ ತಯಾರಿಸಿ ತಮಿಳುನಾಡಿಗೆ ಸರಬರಾಜು ಮಾಡುತ್ತಿರುವುದಾಗಿ ಆರೋಪಿ ಹೇಳಿದ್ದಾನೆ ಎಂದು ಜಿಲ್ಲಾ ಅಬಕಾರಿ ಉಪಆಯುಕ್ತ ನರೇಂದ್ರ ಕುಮಾರ್ ಮಾಹಿತಿ ನೀಡಿದ್ದಾರೆ.

ABOUT THE AUTHOR

...view details