ಚಿಕ್ಕಬಳ್ಳಾಪುರ:ರಾಜ್ಯದಲ್ಲಿ ಮುಖ್ಯಮಂತ್ರಿ ದೊಡ್ಡವರೋ ಅಥವಾ ಸಚಿವ ಮಾಧುಸ್ವಾಮಿ ದೊಡ್ಡವರೋ ಎಂಬುದನ್ನು ಜನರೇ ತೀರ್ಮಾನ ಮಾಡಬೇಕೆಂದು ಮಾಜಿ ಸಚಿವ ಹೆಚ್.ಎಂ.ರೇವಣ್ಣ ವಾಗ್ದಾಳಿ ನಡೆಸಿದ್ದಾರೆ.
ಚಿಕ್ಕಬಳ್ಳಾಪುರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಹುಲಿಯಾಳದಲ್ಲಿ ಆಗಿರುವ ಘಟನೆಯನ್ನು ಖಂಡಿಸುತ್ತೇನೆ. ಅಧಿಕಾರಕ್ಕೆ ಬಂದಿದ್ದೇನೆ ಎಂದು ಕನಕ ವೃತ್ತಕ್ಕಿರುವ ಬೋರ್ಡ್ ತೆಗೆಸಿ ಮತ್ತೊಂದು ಹೆಸರನ್ನು ಹಾಕಿಸುವುದು ಸರಿಯಲ್ಲ. ಸಮಾಜದ ಜನರ ಚಿಂತನೆಗಳನ್ನು ಮಾಧುಸ್ವಾಮಿ ಅರ್ಥ ಮಾಡಿಕೊಳ್ಳಬೇಕು. ಕುರುಬ ಸಮಾಜದ ಸ್ವಾಮೀಜಿಗಳ ಬಗ್ಗೆ ಈ ರೀತಿಯಾಗಿ ಮಾತನಾಡುವುದು ಸರಿಯಲ್ಲ ಎಂದು ಹೇಳಿದ್ರು.