ಶಿಡ್ಲಘಟ್ಟ: ಸತತ ಬರಗಾಲದಿಂದ ತತ್ತರಿಸುತ್ತಿರುವ ಚಿಕ್ಕಬಳ್ಳಾಪುರದಲ್ಲಿ ನರೇಗಾ ಯೋಜನೆಯನ್ನು ಸದುಪಯೋಗಪಡಿಸಿಕೊಂಡು ಅಂರ್ತಜಲ ಮಟ್ಟ ವೃದ್ಧಿಸುವ ಕಲ್ಯಾಣಿಗಳನ್ನು ನಿರ್ಮಿಸಲು ಎಲ್ಲರು ಆಸಕ್ತಿ ವಹಿಸಬೇಕು ಎಂದು ಶಾಸಕ ಜೆ.ಕೆ.ಕೃಷ್ಣಾರೆಡ್ಡಿ ಸಲಹೆ ನೀಡಿದರು.
ನರೇಗಾ ಯೋಜನೆ ಸದುಪಯೋಗಕ್ಕೆ ಶಾಸಕ ಜೆ.ಕೆ.ಕೃಷ್ಣಾರೆಡ್ಡಿ ಕರೆ - ನರೇಗಾ ಯೋಜನೆ
ಚೀಮನಹಳ್ಳಿ ಗ್ರಾಮದಲ್ಲಿ ಕುಂಟೆ ಅಭಿವೃದ್ಧಿ ಮತ್ತು ಬೆಳ್ಳೂಟಿ ಗ್ರಾಮದಲ್ಲಿ ಕಲ್ಯಾಣಿಯನ್ನು ಮಾದರಿಯಾಗಿ ನಿರ್ಮಿಸಲಾಗಿದೆ. ಇದೇ ರೀತಿ ಚಿಂತಾಮಣಿ ಕ್ಷೇತ್ರದ 5 ಹೋಬಳಿಗಳಲ್ಲೂ ಮಾದರಿ ಕಲ್ಯಾಣಿಗಳನ್ನು ನಿರ್ಮಿಸಲು ಯೋಜನೆ ರೂಪಿಸುವಂತೆ ತಾಪಂ ಇಓಗೆ ಸೂಚಿಸಿದ್ದೇನೆ ಎಂದು ಶಾಸಕರು ಹೇಳಿದರು.
ನರೇಗಾ ಕಾಮಗಾರಿ ವೀಕ್ಷಿಸಿದ ಶಾಸಕ
ಅಬ್ಲೂಡು, ಚೀಮನಹಳ್ಳಿ ಹಾಗೂ ಆನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಿಗೆ ಭೇಟಿ ನೀಡಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಕೈಗೊಂಡಿರುವ ಕಾಮಗಾರಿಗಳನ್ನು ವೀಕ್ಷಿಸಿದ ಬಳಿಕ ಮಾತನಾಡಿದರು.
ಜಿಲ್ಲೆಗೆ ಹೆಚ್.ಎನ್.ವ್ಯಾಲಿ ಮತ್ತು ಕೋಲಾರ ಜಿಲ್ಲೆಗೆ ಕೆ.ಸಿ ವ್ಯಾಲಿ ಮೂಲಕ ನೀರು ಹರಿಸುವ ಯೋಜನೆ ಪ್ರಗತಿಯಲ್ಲಿದೆ. ನರೇಗಾ ಯೋಜನೆಯಡಿ ತಾಲೂಕಿನಲ್ಲಿ ಉತ್ತಮವಾಗಿ ಕೆಲಸಗಳು ನಡೆದಿವೆ. ಅದಕ್ಕಾಗಿ ಕ್ಷೇತ್ರದ ಜನಪ್ರತಿನಿಧಿಗಳು, ತಾಪಂ ಇಓ ಹಾಗೂ ವಿವಿಧ ಗ್ರಾಪಂಗಳ ಅಭಿವೃದ್ಧಿ ಅಧಿಕಾರಿಗಳು ವಿಶೇಷ ಕಾಳಜಿ ವಹಿಸಿ ಶ್ರಮವಹಿಸಿದ್ದಾರೆ ಎಂದರು.