ಕರ್ನಾಟಕ

karnataka

ETV Bharat / state

ಬೆಸ್ಕಾಂ ಅಧಿಕಾರಿಗಳಿಂದ ನೂರಾರು ಮರಗಳ ಮಾರಣ ಹೋಮ.. ಪರಿಸರ ಪ್ರೇಮಿಗಳಿಂದ ಶ್ರದ್ದಾಂಜಲಿ ಕಾರ್ಯಕ್ರಮ

ಬೆಸ್ಕಾಂ ಅಧಿಕಾರಿಗಳು ಏಕಾಏಕಿ ನೂರಾರು ಗಿಡಗಳನ್ನು ಕಟಾವು ಮಾಡಿದ್ದಾರೆ. ಹೀಗಾಗಿ, ಪರಿಸರ ಪ್ರೇಮಿಗಳು ಕಟಾವು ಮಾಡಿದ ಮರಗಳಿಗೆ ಶ್ರದ್ಧಾಂಜಲಿ ಸಲ್ಲಿಸುವುದರ ಜೊತೆಗೆ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದಾರೆ.

ಪರಿಸರ ಪ್ರೇಮಿಗಳು ಪ್ರತಿಭಟನೆ ಮಾಡುತ್ತಿರುವುದು
ಪರಿಸರ ಪ್ರೇಮಿಗಳು ಪ್ರತಿಭಟನೆ ಮಾಡುತ್ತಿರುವುದು

By

Published : Jul 6, 2022, 7:55 PM IST

ಚಿಕ್ಕಬಳ್ಳಾಪುರ: ಜಿಲ್ಲೆಯ ಮಂಚನ ಬೆಲೆಯಿಂದ ದಿಬ್ಬರಿನ ಕಡೆಗೆ ಸಂಪರ್ಕ ಕಲ್ಪಿಸುವ ರಸ್ತೆಯ ಬದಿಯಲ್ಲಿ ಇರುವ ಎರಡೂ ಕಡೆಗಳಲ್ಲಿ ಸುಮಾರು 200 ಕ್ಕೂ ಹೆಚ್ಚು ಮರಗಳನ್ನು ಬೆಸ್ಕಾಂ ಅಧಿಕಾರಿಗಳು ವಿದ್ಯುತ್ ತಂತಿಗಳಿಗೆ ತಲುಪುತ್ತವೆ ಎಂದು ಬಡ ಸಮೇತ ಕಟಾವು ಮಾಡಿದ್ದಾರೆ. ಇದು ಪರಿಸರ ಪ್ರೇಮಿಗಳ ಆಕ್ರೋಶಕ್ಕೆ ಕಾರಣವಾಗಿದೆ.

ಬೆಸ್ಕಾಂ ಅಧಿಕಾರಿಗಳು ಮರವನ್ನು ಕಟಾವು ಮಾಡಿರುವ ಕುರಿತು ಪರಿಸರ ಪ್ರೇಮಿ ಗಂಗಾಧರ್ ರೆಡ್ಡಿ ಮಾತನಾಡಿರುವುದು

ವಿದ್ಯುತ್ ಕಂಬಗಳು ಸುಮಾರು 20 ಅಡಿಗೂ ಹೆಚ್ಚು ಎತ್ತರವಿದ್ದು, ಈ ಮರಗಳು 10 ಅಡಿಗಳಷ್ಟು ಮಾತ್ರ ಬೆಳೆದಿವೆ. ಆದರೂ, ಬೆಸ್ಕಾಂ ಅಧಿಕಾರಿಗಳು ಏಕಾಏಕಿ ನೂರಾರು ಗಿಡಗಳನ್ನು ಕಟಾವು ಮಾಡಿದ್ದಾರೆ. ಹೀಗಾಗಿ, ಪರಿಸರ ಪ್ರೇಮಿಗಳು ಕಟಾವು ಮಾಡಿದ ಮರಗಳಿಗೆ ಶ್ರದ್ಧಾಂಜಲಿ ಸಲ್ಲಿಸುವುದರ ಜೊತೆಗೆ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದಾರೆ. ಕಟಾವು ಮಾಡಿದ ಎರಡರಷ್ಟು ಮರಗಳನ್ನು ನೆಡಬೇಕೆಂದು ಆಗ್ರಹಿಸಿದ್ದಾರೆ.

ವನಮಹೋತ್ಸವ ಕಾರ್ಯಕ್ರಮದ ಅಡಿ ಪ್ರತೀ ವರ್ಷ ಸಾವಿರಾರು ಸಸಿಗಳನ್ನು ನೆಡಲಾಗುತ್ತದೆ. ಆದರೆ, ಮಂಚನ ಬೆಲೆಯಿಂದ ದಿಬ್ಬೂರಿನವರೆಗೆ 200 ಕ್ಕೂ ಹೆಚ್ಚು ಮರಗಳನ್ನು ಕಟಾವು ಮಾಡಲಾಗಿದೆ. ಜನರ ತೆರಿಗೆ ಹಣವನ್ನು ಬಳಕೆ ಮಾಡಿಕೊಂಡು ಅರಣ್ಯ ಇಲಾಖೆಯಿಂದ ಪ್ರತೀ ವರ್ಷ ಲಕ್ಷಾಂತರ ಹಣ ವ್ಯಯ ಮಾಡಿ ಸಸಿಗಳನ್ನು ನೆಡುತ್ತಾರೆ.

ಅಧಿಕಾರಿಗಳ ನಡೆ ನೋಡಿ ಮುಂದಿನ ತೀರ್ಮಾನ: ಇದೇ ರೀತಿ ಬೆಸ್ಕಾಂ ಅಧಿಕಾರಿಗಳು ಮರವನ್ನು ಕಟ್​ ಮಾಡುತ್ತಾ ಮುಂದುವರಿದರೆ ಇನ್ನಷ್ಟು ಪರಿಸರ ಪ್ರೇಮಿಗಳು ಒಟ್ಟಾಗಿ ಸೇರಿ ಪ್ರತಿಭಟನೆ ಮಾಡಲಾಗುವುದು. ಈಗ ಕಟಾವು ಮಾಡಿರುವ ಎರಡರಷ್ಟು ಸಸಿಗಳನ್ನು ಬೆಸ್ಕಾಂ ಅಧಿಕಾರಿಗಳು ನೆಡಬೇಕಿದೆ. ಅಧಿಕಾರಿಗಳ ಈ ಕೃತ್ಯದ ವಿರುದ್ದ ಕಾನೂನಾತ್ಮಕ ಹೋರಾಟ ಮಾಡುವುದು ಏನು ದೊಡ್ಡ ವಿಚಾರ ಅಲ್ಲ. ಆದರೆ, ಅವರ ಮುಂದಿನ ನಡೆಯನ್ನು ನೋಡಿ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ಪರಿಸರ ಪ್ರೇಮಿಗಳು ಎಚ್ಚರಿಸಿದ್ದಾರೆ.

ಓದಿ :ಡ್ರಗ್ಸ್​ ಪ್ರಕರಣದ ಆರೋಪಿ ಕಿಶೋರ್ ಶೆಟ್ಟಿ ಅಂಗಿ ಬಿಚ್ಚಿಸಿ ನೀತಿ ಪಾಠ ಮಾಡಿದ ಕಮಿಷನರ್​

For All Latest Updates

TAGGED:

ABOUT THE AUTHOR

...view details