ಕರ್ನಾಟಕ

karnataka

By

Published : Dec 16, 2020, 12:21 PM IST

ETV Bharat / state

ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಚುನಾವಣೆ: 98.04ರಷ್ಟು ಮತದಾನದೊಂದಿಗೆ ಮುಕ್ತಾಯ

ಚಿಂತಾಮಣಿ ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಚುನಾವಣೆ ಇಂದು ನಗರದ ಮಹಾತ್ಮ ಗಾಂಧಿ ಸರ್ಕಾರಿ ಬಾಲಕರ ಪ್ರೌಢಶಾಲೆಯಲ್ಲಿ ನಡೆದಿದ್ದು, ಶೇಕಡಾ 98.04ರಷ್ಟು ಮತದಾನದೊಂದಿಗೆ ಮುಕ್ತಾಯ ಕಂಡಿದೆ.

chintamani
ಚುನಾವಣೆ ಮುಕ್ತಾಯ

ಚಿಂತಾಮಣಿ:ತಾಲೂಕಿನ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಚುನಾವಣೆ ಇಂದು ನಗರದ ಮಹಾತ್ಮ ಗಾಂಧಿ ಸರ್ಕಾರಿ ಬಾಲಕರ ಪ್ರೌಢಶಾಲೆಯಲ್ಲಿ ನಡೆದಿದ್ದು, ಶೇಕಡಾ 98.04ರಷ್ಟು ಮತ ಚಲಾವಣೆಯೊಂದಿಗೆ ಮುಕ್ತಾಯ ಕಂಡಿದೆ.

ಚಿಂತಾಮಣಿ ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಚುನಾವಣೆ ಮುಕ್ತಾಯವಾಗಿದೆ.

ಒಟ್ಟು ಹದಿನೆಂಟು ಸ್ಥಾನಗಳಿಗೆ 54 ಶಿಕ್ಷಕರು ಕಣದಲ್ಲಿದ್ದು, ಸಾಮಾನ್ಯ ಕ್ಷೇತ್ರದ 12 ಸ್ಥಾನಗಳಿಗೆ 37 ಮಂದಿ ಮಹಿಳಾ ಅಭ್ಯರ್ಥಿಗಳು, ಮೀಸಲಾತಿ 6 ಸ್ಥಾನಗಳಿಗೆ 17 ಮಂದಿ ಸ್ಪರ್ಧಿಸಿದ್ದು, ಒಬ್ಬ ಮತದಾರ ಕನಿಷ್ಠ ಹನ್ನೆರಡು ಮತವನ್ನು ಚಲಾಯಿಸಬಹುದಾಗಿತ್ತು. ಮಹಿಳಾ ಮೀಸಲು ಕ್ಷೇತ್ರ ಮತಪತ್ರ ಪಿಂಕ್ ಬಣ್ಣದಾಗಿದ್ದು, ಒಬ್ಬರು 6 ಮತಗಳನ್ನು ಚಲಾಯಿಸಲು ಅವಕಾಶ ಇತ್ತು.

ಓದಿ:ಅಂಚೆ ಇಲಾಖೆಯ ಕರ್ನಾಟಕ ವಲಯದ ಇಬ್ಬರಿಗೆ 'ಮೇಘದೂತ್' ಪ್ರಶಸ್ತಿ

ಒಟ್ಟು 860 ಮತದಾರರಿದ್ದು ಈ ಪೈಕಿ 840 ಮಂದಿ ಶಿಕ್ಷಕರು ತಮ್ಮ ಹಕ್ಕು ಚಲಾಯಿಸಿದ್ದಾರೆ. ಚುನಾವಣೆಯ ವೇಳೆ ಸಾಮಾಜಿಕ ಅಂತರ ಹಾಗೂ ಶಿಸ್ತನ್ನು ಕಾಪಾಡದ ಹಿನ್ನೆಲೆ ಪೊಲೀಸರು ಹಾಗೂ ಶಿಕ್ಷಕರ ನಡುವೆ ವಾಗ್ವಾದ ನಡೆದಿದ್ದು, ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು.

ABOUT THE AUTHOR

...view details