ಕರ್ನಾಟಕ

karnataka

ETV Bharat / state

ಗುಡಿಬಂಡೆಯಲ್ಲಿ ಸಂಭ್ರಮದ ಈದ್ ಮಿಲಾದ್: ಗಿಡ ನೆಡುವ ಮೂಲಕ ವಿನೂತನ ಆಚರಣೆ - ಗಿಡ ನೆಡುವ ಮೂಲಕ ಗುಡಿಬಂಡೆಯಲ್ಲಿ ಈದ್ ಮಿಲಾದ್ ಆಚರಣೆ

ಗುಡಿಬಂಡೆ ಪಟ್ಟಣದಲ್ಲಿ ಈದ್‌ ಮಿಲಾದ್ ಹಬ್ಬವನ್ನು ಗಿಡನೆಡುವ ಮೂಲಕ ಹಿಂದೂ ಮತ್ತು ಮುಸ್ಲಿಮರು ಸಂಭ್ರಮದಿಂದ ಆಚರಿಸಿದರು. ಪಟ್ಟಣದ 3ನೇ ವಾರ್ಡ್​ನಲ್ಲಿ ಗಿಡ ನೆಟ್ಟು ಹಬ್ಬವನ್ನು ವಿನೂತನವಾಗಿ ಆಚರಿಸಲಾಯಿತು.

ಗುಡಿಬಂಡೆಯಲ್ಲಿ ಗಿಡ ನೆಡುವ ಮೂಲಕ ಈದ್ ಮಿಲಾದ್ ಆಚರಣೆ.

By

Published : Nov 10, 2019, 6:40 PM IST

ಚಿಕ್ಕಬಳ್ಳಾಪುರ: ಜಿಲ್ಲೆಯ ಗುಡುಬಂಡೆಯಲ್ಲಿ ಈದ್‌ ಮಿಲಾದ್ ಹಬ್ಬವನ್ನು, ಗಿಡನೆಡುವ ಮೂಲಕ ಹಿಂದೂ ಮತ್ತು ಮುಸ್ಲೀಮರು ಸಂಭ್ರಮದಿಂದ ಆಚರಿಸಿದರು. ಪಟ್ಟಣದ 3ನೇ ವಾರ್ಡ್​ನಲ್ಲಿ ಗಿಡ ನೆಟ್ಟು ಹಬ್ಬವನ್ನು ವಿನೂತನವಾಗಿ ಆಚರಿಸಲಾಯಿತು.

ಈ ವೇಳೆ ಮಾತನಾಡಿದ ಪ.ಪಂ. ಮಾಜಿ ಅಧ್ಯಕ್ಷ ರಿಯಾಜ್ ಪಾಷ, ಈದ್ ಮಿಲಾದ್ ಸಂದೇಶಗಳನ್ನು ಎಲ್ಲರೂ ಪಾಲಿಸಬೇಕು. ಅಲ್ಲಾಹುವಿನ ಆಶೀರ್ವಾದ ಸದಾ ನಿಮ್ಮ ಮತ್ತು ನಿಮ್ಮ ಕುಟುಂಬದ ಮೇಲಿರಲಿ. ನಿಮ್ಮ ಕಷ್ಟಗಳು ದೂರವಾಗಿ, ನಿಮ್ಮ ಬಾಳಿನಲ್ಲಿ ಸಂಭ್ರಮ ಮನೆ ಮಾಡಲಿ ಎಂದು ಆಶಿಸಿದರು. ಪ್ರತಿಯೊಬ್ಬರು ಸಮಾಜದ ಅಭಿವೃದ್ಧಿಯನ್ನು ಆ ದೇವರ ಹೆಸರಿನಲ್ಲಿ ಮಾಡಬೇಕು ಎಂದು ಹೇಳಿದರು.

ಗುಡಿಬಂಡೆಯಲ್ಲಿ ಗಿಡ ನೆಡುವ ಮೂಲಕ ಈದ್ ಮಿಲಾದ್ ಆಚರಣೆ

ಇನ್ನು ಪರಿಸರವಾದಿ ನಾಗರಾಜ್ ಮಾತನಾಡಿ, ಸಮಾಜದಲ್ಲಿ ಶಾಂತಿ ನೆಲೆಸಲಿ. ಸೋದರತೆಯ ದೀಪ ಸದಾ ಪ್ರಜ್ವಲಿಸಲಿ. ಪ್ರತಿ ಮನುಷ್ಯ ತನ್ನ ಪ್ರತಿ ಸಂತೋಷವನ್ನು ಗಿಡನೆಡುವ ಮೂಲಕ ಆಚರಿಸಲು ಮಂದಾಗಬೇಕು ಎಂದು ಹೇಳಿದರು. ಕಾರ್ಯಕ್ರಮದಲ್ಲಿ ರಾಜ್ಯಪರಿಸರ ಪ್ರಶಸ್ತಿ ವಿಜೇತ ಡಾ. ಗುಂಪುಮರದ ಆನಂದ್, ಪರಿಸರ ವೇದಿಕೆ ಅಧ್ಯಕ್ಷ ಬಿ. ಮಂಜುನಾಥ್, ಕಾರ್ಯದರ್ಶಿ ಜಿ.ಎಸ್. ಭರತ್, ಕನ್ನಡ ಸೇನೆ ಅಧ್ಯಕ್ಷ ಅಂಬರೀಶ್, ಸ್ಥಳಿಯರಾದ ಮಾಬು, ಸಿರಾಜ್, ರಸೂಲ್, ಸರ್ದಾರ್ ಸೇರಿದಂತೆ ಮುಂತಾದವರು ಭಾಗವಹಿಸಿದ್ದರು.

For All Latest Updates

ABOUT THE AUTHOR

...view details