ಕರ್ನಾಟಕ

karnataka

ETV Bharat / state

ಚಿಕ್ಕಬಳ್ಳಾಪುರದಲ್ಲಿ ಈದ್ ಮಿಲಾದ್ ಆಚರಣೆ: ಚಿಂತಾಮಣಿಯಲ್ಲಿ ಅದ್ದೂರಿ ಮೆರವಣಿಗೆ - ಚಿಂತಾಮಣಿಯಲ್ಲಿ ಈದ್ ಮಿಲಾದ್ ಅಂಗವಾಗಿ ಪ್ರಾರ್ಥನ ಮಂದಿರಗಳ ಮೆರವಣಿಗೆ

ಮೌಲಿದ್ ಪಾರಾಯಣ ಹಾಗೂ ಮಿಲಾದ್ ಮೆರವಣಿಗೆ ನಡೆಸುವ ಮೂಲಕ ಈದ್ ಮಿಲಾದ್  ಹಬ್ಬವನ್ನು ಜಿಲ್ಲೆಯಾದ್ಯಂತ ಸಂಭ್ರಮದಿಂದ ಆಚರಿಸಲಾಯಿತು.

ಚಿಕ್ಕಬಳ್ಳಾಪುರದಲ್ಲಿ ಈದ್ ಮಿಲಾದ್ ಆಚರಣೆ

By

Published : Nov 10, 2019, 6:51 PM IST

ಚಿಕ್ಕಬಳ್ಳಾಪುರ:ಮೌಲಿದ್ ಪಾರಾಯಣ ಹಾಗೂ ಮಿಲಾದ್ ಮೆರವಣಿಗೆ ನಡೆಸುವ ಮೂಲಕ ಈದ್ ಮಿಲಾದ್ ಹಬ್ಬವನ್ನು ಜಿಲ್ಲೆಯಾದ್ಯಂತ ಸಂಭ್ರಮದಿಂದ ಆಚರಿಸಲಾಯಿತು. ಜಿಲ್ಲೆಯ ಚಿಂತಾಮಣಿ, ಗೌರಿಬಿದನೂರು, ಶಿಡ್ಲಘಟ್ಟ, ಬಾಗೇಪಲ್ಲಿ ತಾಲೂಕುಗಳಲ್ಲಿ ಮೆರವಣಿಗೆ ಮಾಡಿ ಶಾಂತಿದೂತ ಪೈಗಂಬರ್ ಜನ್ಮ ದಿನವನ್ನು ವಿಜೃಂಭಣೆಯಿಂದ ಆಚರಿಸಲಾಗಿದೆ.

ಈದ್ ಮಿಲಾದ್ ಅಂಗವಾಗಿ ಚಿಂತಾಮಣಿ ನಗರದಲ್ಲಿ ವಿವಿಧ ಪ್ರಾರ್ಥನಾ ಮಂದಿರಗಳ ಪ್ರತಿಕೃತಿಗಳ ಮೆರವಣಿಗೆ ಮಾಡಲಾಯಿತು. ದೊಡ್ಡ ಪೇಟೆಯಲ್ಲಿರುವ ಜಾಮಿಯಾ ಮಸೀದಿಯಿಂದ ಆರಂಭವಾದ ಮೆರವಣಿಗೆ ಆಜಾದ್ ಚೌಕ, ಅಗ್ರಹಾರ, ಮಹಬೂಬ್ ನಗರ, ಎಂ.ಜಿ. ರಸ್ತೆಯ ಮೂಲಕ ಬಾಗೇಪಲ್ಲಿ ವೃತ್ತದಿಂದ ಈದ್ಗಾ ಮೈದಾನ ಬಳಿ ಮುಕ್ತಾಯಗೊಂಡಿತು. ಹಬ್ಬದ ಪ್ರಯುಕ್ತ ನಗರದ ಪ್ರಮುಖ ಬೀದಿಗಳನ್ನು ಅಲಂಕರಿಸಲಾಗಿದ್ದು, ಮಹಿಳೆಯರು ಸಿಹಿ ತಿಂಡಿ ತಯಾರಿಸಿ ವಿತರಿಸಿದರು. ಕಿರಿಯರು ಮತ್ತು ಹಿರಿಯರು ಹೊಸ ಉಡುಪು ತೊಟ್ಟು ಸಂತಸಪಟ್ಟರು. ಮುಸ್ಲೀಂ ಬಾಂಧವರು ಪ್ರಾರ್ಥನೆಯಲ್ಲಿ ಪಾಲ್ಗೊಂಡು ಪರಸ್ಪರ ಶುಭ ಹಾರೈಸಿದರು.

ಚಿಕ್ಕಬಳ್ಳಾಪುರದಲ್ಲಿ ಈದ್ ಮಿಲಾದ್ ಆಚರಣೆ

ಇನ್ನು ವಿವಿಧ ಬಡಾವಣೆಗಳ ಮಸೀದಿಗಳಲ್ಲಿ ಗುಂಪುಗೂಡಿದ ಬಹುತೇಕ ಮಂದಿ ಮೆರವಣಿಗೆಯಲ್ಲಿ ಭಾಗಿಯಾಗಿ, ಬಾವುಟ ಹಿಡಿದುಕೊಂಡು ಮಹಮ್ಮದ್ ಪೈಗಂಬರ್ ಅವರನ್ನು ಸ್ಮರಿಸಿದರು.

ABOUT THE AUTHOR

...view details