ಬಾಗೇಪಲ್ಲಿ(ಚಿಕ್ಕಬಳ್ಳಾಪುರ):ತಾಲೂಕಿನ ಕದಿರನ್ನಗಾರಿಪಲ್ಲಿ ಸೇರಿದಂತೆ ಹಲವು ಗ್ರಾಮಗಳಲ್ಲಿ ಭೂಕಂಪನದ ಅನುಭವವಾಗಿದೆ. ನಿನ್ನೆ ರಾತ್ರಿ (ಭಾನುವಾರ) ಭೂಮಿಯೊಳಗಿಂದ ಕೇಳಿಬಂದ ಸ್ಫೋಟದ ಸದ್ದಿನ ಜೊತೆಗೆ ಭೂಮಿ ಕಂಪಿಸಿತು.
ಬಾಗೇಪಲ್ಲಿ ತಾಲೂಕಿನ ಹಲವೆಡೆ ಭೂಕಂಪನ ಅನುಭವ, ಬೆಚ್ಚಿಬಿದ್ದ ಜನ - ಚಿಕ್ಕಬಳ್ಳಾಪುರ ಲೇಟೆಸ್ಟ್ ಅಪ್ಡೇಟ್ ನ್ಯೂಸ್
ಬಾಗೇಪಲ್ಲಿ ತಾಲೂಕಿನ ಹಲವು ಹಳ್ಳಿಗಳಲ್ಲಿ ಭೂಕಂಪನದ ಅನುಭವವಾಗಿದೆ. ಭೂಮಿಯಿಂದ ಕೇಳಿ ಬಂದ ಭಾರಿ ಶಬ್ದಕ್ಕೆ ಜನರು ಭೀತಿಗೊಳಗಾಗಿದ್ದಾರೆ.
ಬಾಗೇಪಲ್ಲಿ ತಾಲೂಕಿನ ಹಲವು ಹಳ್ಳಿಗಳಲ್ಲಿ ಭೂಕಂಪನ ಅನುಭವ
ಬಾಗೇಪಲ್ಲಿ ತಾಲೂಕಿನ ಪೆದ್ದ ತುಮಕೇಪಲ್ಲಿ, ಲಘುಮದ್ದೇಪಲ್ಲಿ, ಗುರ್ರಾಲದಿನ್ನೆ, ಶಂಖವಾರಂಪಲ್ಲಿ, ಯಲ್ಲಂಪಲ್ಲಿ, ಮದ್ದಲಖಾನೆ, ಈರಗಂಟಪಲ್ಲಿ ಹಾಗೂ ಟೆಂಕಮಾಕಲಪಲ್ಲಿಯಲ್ಲಿ ಭೂಮಿ ಕಂಪಿಸಿದೆ. 9:30 ಹಾಗೂ 9:45 ಗಂಟೆ ಸುಮಾರಿಗೆ ಎರಡು ಬಾರಿ ಶಬ್ದ ಕೇಳಿ ಬಂದಿದೆ. ಭಾರಿ ಶಬ್ದಕ್ಕೆ ಪೆದ್ದತುಮಕೇಪಲ್ಲಿಯಲ್ಲಿ ಜನರು ಮನೆಗಳಿಂದ ಹೊರಗೆ ಓಡಿ ಬಂದಿದ್ದಾರೆ. ಮಲ್ಲಸಂದ್ರ, ಸಡ್ಲವಾರಿಪಲ್ಲಿ, ರಾಯದುರಗಂಪಲ್ಲಿಗಳಲ್ಲಿಯೂ ಸ್ಫೋಟ ಮತ್ತು ಭೂಕಂಪನದ ಅನುಭವ ಆಗಿದೆ ಎಂದು ವರದಿಯಾಗಿದೆ.
ಇದನ್ನೂ ಓದಿ:ಅರುಣಾಚಲ ಪ್ರದೇಶದಲ್ಲಿ 4.2 ತೀವ್ರತೆಯ ಭೂಕಂಪನ