ಚಿಕ್ಕಬಳ್ಳಾಪುರ: ಕುಡಿದ ಮತ್ತಿನಲ್ಲಿ ಆಶಾ ಕಾರ್ಯಕರ್ತೆ ಹಾಗೂ ಆಕೆಯ ಪತಿಯ ಮೇಲೆ ಹಲ್ಲೆ ನಡೆಸಿದ ಘಟನೆ ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ಪೂಲಕುಂಟ್ಲಹಳ್ಳಿಯಲ್ಲಿ ನಡೆದಿದೆ.
ಗಂಗಹಳ್ಳಿ ಗ್ರಾಮದ ಆಶಾಕಾರ್ಯಕರ್ತೆ ರಮಣಮ್ಮ ಹಾಗೂ ಪತಿ ನರಸಿಂಹಮೂರ್ತಿ ಹಲ್ಲೆಗೊಳಗಾದವರು ಎಂದು ತಿಳಿದು ಬಂದಿದೆ. ಸರ್ವೆ ಕಾರ್ಯ ಮುಗಿಸಿದ್ದ ಆಶಾಕಾರ್ಯಕರ್ತೆ ಫೂಲಕುಂಟಹಳ್ಳಿ ಗ್ರಾಮದ ತನ್ನ ಸ್ನೇಹಿತೆ ಗಿರಿಜಮ್ಮ ಮನೆಗೆ ಬಂದಿದ್ದು, ನರಸಿಂಹಮೂರ್ತಿ ಪತ್ನಿಯನ್ನು ಕರೆದೊಯ್ಯಲು ಬಂದ ವೇಳೆ ಮದ್ಯ ಸೇವಿಸಿ ಅಮಲಿನಲ್ಲಿದ್ದ ಅದೇ ಗ್ರಾಮದ ಕೇಶವ ಎಂಬಾತ ಕ್ಷುಲ್ಲಕ ಕಾರಣಕ್ಕೆ ನರಸಿಂಹಮೂರ್ತಿ ಜೊತೆ ಗಲಾಟೆ ಶುರುಮಾಡಿ ಕಲ್ಲಿನಿಂದ ತಲೆಗೆ ಹೊಡೆದಿದ್ದಾನೆ.