ಕರ್ನಾಟಕ

karnataka

ETV Bharat / state

ದೇಶದಲ್ಲೇ ಮೊದಲ ಬಾರಿಗೆ ಡ್ರೋನ್ ಮೂಲಕ ಮನೆಮನೆಗಳಿಗೆ ಔಷಧ ಪೂರೈಕೆ; ಅದರ ಕಾರ್ಯ ಹೀಗಿರಲಿದೆ - ಗೌರಿಬಿದನೂರಿನಲ್ಲಿ ಔಷಧಗಳ ಪೂರೈಕೆ

ಜೂ.21 ರಿಂದ ಟಿಎಎಸ್‌ ಕಂಪನಿಯು ಅಧಿಕೃತವಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ಅನುಮತಿ ಪಡೆದುಕೊಂಡು ಭಾರತದಲ್ಲೇ ಪ್ರಥಮವಾಗಿ ಜಿಲ್ಲೆಯ ಗೌರಿಬಿದನೂರಿನಲ್ಲಿ ಈ ಪ್ರಾಯೋಗ ನಡೆಸಲು ತೀರ್ಮಾನಿಸಲಾಗಿದೆ. 30-45 ದಿನಗಳ ಕಾಲ ಈ ಪ್ರಯೋಗ ನಡೆಯಲಿದ್ದು, ಮರ, ಕಟ್ಟಡ ಅಡ್ಡ ಬಂದರೂ ತೊಂದರೆಯಿಲ್ಲದೇ ಹಾಗೂ ಗಾಳಿ ಮಳೆ ಇದ್ದರೂ ಸಹ ಈ ಡ್ರೋನ್‌ ತನ್ನ ಕಾರ್ಯವನ್ನು ಸಮರ್ಥವಾಗಿ ನಿರ್ವಹಣೆ ಮಾಡಬಲ್ಲದು.

Drug delivery to house to house  by drone for the first time in the country
ಸಿದ್ಧಗೊಂಡ ಡ್ರೋನ್

By

Published : Jun 19, 2021, 6:11 PM IST

Updated : Jun 19, 2021, 7:28 PM IST

ಚಿಕ್ಕಬಳ್ಳಾಪುರ: ಡ್ರೋನ್ ಮೂಲಕ ಔಷಧಗಳನ್ನು ಪೂರೈಕೆ ಮಾಡುವ ದೇಶದ ಮೊಟ್ಟ ಮೊದಲ ಪ್ರಯೋಗವು ಜೂನ್ 21 ರಿಂದ ಜಿಲ್ಲೆಯ ಗೌರಿಬಿದನೂರಿನಲ್ಲಿ ಅಧಿಕೃತವಾಗಿ ಆರಂಭವಾಗಲಿದೆ. ಇದಕ್ಕೂ ಮುನ್ನ ಅಲ್ಲಿನ ಅಧಿಕಾರಿಗಳು ಎರಡು ಡ್ರೋನ್‌ಗಳನ್ನು ಪ್ರಯೋಗಕ್ಕಾಗಿಯೇ ಸಿದ್ಧಪಡಿಸುತ್ತಿದ್ದಾರೆ.

ಡ್ರೋನ್ ಮೂಲಕ ಔಷಧ ಸಾಗಿಸುವ ದೇಶದ ಪ್ರಥಮ ಪ್ರಯೋಗ ಇದಾಗಿದ್ದು ಜೂನ್ 18 ರಿಂದ 30 - 45 ದಿನಗಳವರೆಗೆ ಈ ಪರೀಕ್ಷೆಯನ್ನು ನಡೆಸಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಈಗಾಗಲೇ ಬೆಂಗಳೂರಿನ ಟಿಎಎಸ್ ಸಂಸ್ಥೆ ನೇತೃತ್ವದಲ್ಲಿ ಪ್ರಯತ್ನ ಮಾಡಲಾಗುತ್ತಿದ್ದು, ಇದರ ಜೊತೆಗೆ ಟಿಎಎಸ್‌ಗೆ ನಾರಾಯಣ ಆರೋಗ್ಯ ಸಂಸ್ಥೆಯೂ ಸಹ ಸಹಭಾಗಿತ್ವವನ್ನು ಪಡೆದುಕೊಂಡಿದ್ದು ಜೂನ್ 21 ರಂದು ಭಾಗಿಯಾಗಲಿದೆ.

ಔಷಧ ಪೂರೈಕೆ ಬಗ್ಗೆ ಅಧಿಕಾರಿಗಳ ಮಾಹಿತಿ

ಟಿಎಎಸ್ ಜೊತೆಗೆ ವೃತ್ತಿಪರ ಡ್ರೋನ್ ಅಪ್ಲಿಕೇಷನ್‌ಗಳಿಗೆ ವೈಮಾನಿಕ ಸಂಚಾರ ಜಾಗೃತಿ ನೀಡುವ ಇನ್ವೋಲಿ - ಸ್ವಿಸ್ ಮತ್ತು ಸುರಕ್ಷಿತಾ ಪರಿಣತ ಹನಿವೆಲ್ ಏರೋಸ್ಪೇಸ್ ಸಂಸ್ಥೆಗಳಿವೆ. ಔಷಧ ಸಾಗಣೆ ಪ್ರಯೋಗಕ್ಕೆ ಮೆಡ್‌ಕಾಪ್ಟರ್ ಮತ್ತು ಟಿಎಎಸ್‌ನ ರಾಂಡಿಂಟ್ ಎಂಬ ಎರಡು ವಿಭಿನ್ನ ಡ್ರೋನ್‌ಗಳನ್ನು ಬಳಸಲಾಗುತ್ತದೆ.

ಇದನ್ನೂ ಓದಿ: ಡ್ರೋನ್ ಮೂಲಕ ಔಷಧ ಪೂರೈಕೆ: ಗೌರಿಬಿದನೂರಿನಲ್ಲಿ ದೇಶದ ಮೊದಲ ಪ್ರಯೋಗ

ಇನ್ನೂ ಸಣ್ಣ ಸಾಮರ್ಥ್ಯದ ಮೆಡ್‌ಕಾಪ್ಟರ್ 15 ಕಿಮೀ ದೂರದವರೆಗೆ 1 ಕೆಜಿ ತೂಕವನ್ನು ಸಾಗಿಸಬಲ್ಲದು. ರಾಂಡಿಂಟ್ 12 ಕಿಮೀ ದೂರವರೆಗೆ 2 ಕೆಜಿ ಸಾಗಿಸಬಲ್ಲದು. ಈ ಎರಡು ಡ್ರೋನ್‌ಗಳ ಮೂಲಕ 30-45 ದಿನಗಳವರೆಗೆ ಪರೀಕ್ಷೆ ನಡೆಸಲಾಗುತ್ತದೆ. ಇನ್ನೂ ಕಳೆದ ದಿನ ತಾಂತ್ರಿಕ ದೋಷದಿಂದ ಡ್ರೋನ್‌ಗಳ ಹಾರಾಟವನ್ನು ತಡೆಯಲಾಗಿದ್ದು ಸದ್ಯ ಇದೇ ತಿಂಗಳ 21 ರಂದು ಅಧಿಕೃತವಾಗಿ ಮೆಡ್ ಕಾಪ್ಟರ್‌ಗಳ ಮೂಲಕ ಪ್ರಯೋಗಕ್ಕೆ ಅಧಿಕಾರಿಗಳು ಚಾಲನೆ ನೀಡಲಿದ್ದಾರೆ.

Last Updated : Jun 19, 2021, 7:28 PM IST

ABOUT THE AUTHOR

...view details