ಚಿಕ್ಕಬಳ್ಳಾಪುರ :ಕೆ.ಎಸ್.ಆರ್.ಟಿ.ಸಿ ಬಸ್ ತಾಂತ್ರಿಕ ದೋಷದಿಂದಾಗಿ ಅಪಘಾತಕ್ಕೆ ತುತ್ತಾಗಿದ್ದು, ಚಾಲಕನ ಸಮಯ ಪ್ರಜ್ಞೆಯಿಂದಾಗಿ ದೊಡ್ಡ ದುರಂತವೊಂದು ತಪ್ಪಿದ ಘಟನೆ ಜಿಲ್ಲೆಯ ಗುಡಿಬಂಡೆ ಪಟ್ಟಣದ ಹೊರವಲಯದಲ್ಲಿ ನಡೆದಿದೆ.
ಚಾಲಕನ ಸಮಯ ಪ್ರಜ್ಞೆ; 20 ಪ್ರಯಾಣಿಕರು ಬಚಾವ್! - Kannada news
ಕೆರೆಯ ಕಟ್ಟೆಯ ಮೇಲೆ ಬಸ್‍ನ ಬೇರಿಂಗ್ ಕಟ್ ಆಗಿದೆ. ಇದನ್ನರಿತ ಚಾಲಕ ಕೆರೆಯೊಳಗೆ ಬೀಳುತ್ತಿದ್ದ ಬಸ್ಸನ್ನು ಎಡಭಾಗಕ್ಕೆ ತಿರುಗಿಸಿ ಬಸ್‍ನಲ್ಲಿದ್ದ 20 ಕ್ಕೂ ಹೆಚ್ಚು ಪ್ರಯಾಣಿಕರನ್ನು ಪ್ರಾಣಾಪಾಯದಿಂದ ಪಾರು ಮಾಡಿದ್ದಾನೆ.
ಬಾಗೇಪಲ್ಲಿ ಘಟಕಕ್ಕೆ ಸೇರಿದ ಬಸ್ ಮಂಗಳವಾರ ಸಂಜೆ 5.30 ಗುಡಿಬಂಡೆಯಿಂದ ಬೆಂಗಳೂರಿಗೆ ತೆರಳುತ್ತಿತ್ತು. ಈ ವೇಳೆ, ಅಮಾನಿಬೈರಸಾಗರ ಕೆರೆಯ ಕಟ್ಟೆಯ ಮೇಲೆ ಬಸ್‍ನ ಬೇರಿಂಗ್ ತುಂಡಾಗಿದೆ. ಇದನ್ನು ಅರಿತ ಚಾಲಕ ತನ್ನ ಸಮಯ ಪ್ರಜ್ಞೆಯಿಂದಾಗಿ ಕೆರೆಯೊಳಗೆ ಬೀಳುತ್ತಿದ್ದ ಬಸ್ಸನ್ನು ಎಡಭಾಗಕ್ಕೆ ತಿರುಗಿಸಿ ಬಸ್‍ನಲ್ಲಿದ್ದ 20 ಕ್ಕೂ ಹೆಚ್ಚು ಪ್ರಯಾಣಿಕರನ್ನು ಪ್ರಾಣಾಪಾಯದಿಂದ ಪಾರು ಮಾಡಿದ್ದಾನೆ.
ಅಧಿಕಾರಿಗಳು ಗುಡಿಬಂಡೆ ತಾಲ್ಲೂಕನ್ನು ನಿರ್ಲಕ್ಷಿಸುತ್ತಿದ್ದು ಈ ಭಾಗಕ್ಕೆ ಕಳುಹಿಸುವ ಬಸ್ಸುಗಳು ಬಹುತೇಕ ಹಳೆಯದ್ದಾಗಿವೆ. ಕೇವಲ ಕಾಟಾಚಾರಕ್ಕೆ ಇಂತಹ ಬಸ್ಸುಗಳನ್ನು ಕಳುಹಿಸುತ್ತಾರೆ ಎಂದು ಸಾರ್ವಜನಿಕರು ಕೆ.ಎಸ್.ಆರ್.ಟಿ.ಸಿ ಇಲಾಖೆಗೆ ಹಿಡಿ ಶಾಪ ಹಾಕಿದ್ದಾರೆ.