ಕರ್ನಾಟಕ

karnataka

ETV Bharat / state

ಮುಷ್ಕರದ ನಡುವೆಯೂ ಕರ್ತವ್ಯಕ್ಕೆ ಹಾಜರಾದ ಸಾರಿಗೆ ನೌಕರರ ಭಾವಚಿತ್ರಕ್ಕೆ ಶ್ರದ್ದಾಂಜಲಿ ಅರ್ಪಣೆ! - driver and conducter joined the duty in chikkaballapura

ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಸಾರಿಗೆ ನೌಕರರು ಕಳೆದ ಮೂರು ದಿನಗಳಿಂದ ಮುಷ್ಕರ ನಡೆಸುತ್ತಿರುವ ನಡುವೆಯೇ ಚಿಕ್ಕಬಳ್ಳಾಪುರದಲ್ಲಿ ಬಸ್​ ಚಾಲಕ ಹಾಗೂ ನಿರ್ವಾಹಕ ಕರ್ತವ್ಯಕ್ಕೆ ಹಾಜರಾದ್ದರಿಂದ ಆಕ್ರೋಶಗೊಂಡ ಸಹೊದ್ಯೋಗಿಗಳು ಅವರ ಭಾವಚಿತ್ರಕ್ಕೆ ಶ್ರದ್ಧಾಂಜಲಿ ಅರ್ಪಿಸಿರುವ ಪೋಸ್ಟ್​ಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ.

driver-and-conducter-joined-the-duty-while-protest-on-going-in-chikkaballapura
ಚಿಕ್ಕಬಳ್ಳಾಪುರ

By

Published : Apr 9, 2021, 4:02 PM IST

ಚಿಕ್ಕಬಳ್ಳಾಪುರ: ಕರ್ತವ್ಯಕ್ಕೆ ಹಾಜರಾದ ಬಸ್ ಚಾಲಕ ಹಾಗೂ ನಿರ್ವಾಹಕನ ಭಾವಚಿತ್ರಕ್ಕೆ ಶ್ರದ್ಧಾಂಜಲಿ ಅರ್ಪಿಸಿರುವ ಪೋಸ್ಟ್​ಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟ ಘಟನೆ ಜಿಲ್ಲೆಯಲ್ಲಿ ನಡೆದಿದೆ.

ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಸಾರಿಗೆ ನೌಕರರು ಕಳೆದ ಮೂರು ದಿನಗಳಿಂದ ಮುಷ್ಕರ ನಡೆಸುತ್ತಿದ್ದಾರೆ. ಕಳೆದ ದಿನ ಚಿಂತಾಮಣಿ ನಗರದಿಂದ ಶ್ರೀನಿವಾಸಪುರಕ್ಕೆ ಕೆಎಸ್ಆರ್​ಟಿಸಿ ಬಸ್ ಸಂಚಾರ ನಡೆಸಿದ ಸಾರಿಗೆ ನೌಕರರನ್ನು ಕಂಡು ಆಕ್ರೋಶಗೊಂಡಿರುವ ಸಹೋದ್ಯೋಗಿಗಳು ಭಾವಪೂರ್ಣ ಶ್ರದ್ಧಾಂಜಲಿ ಅರ್ಪಿಸುವ ಪೋಸ್ಟ್‌ಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ.

ಚಿಕ್ಕಬಳ್ಳಾಪುರದ ಕೆಎಸ್ಆರ್​ಟಿಸಿ ಡಿಪೋದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸೂರ್ಯ ನಾರಾಯಣರಾವ್, ಮೂರ್ತಿ ಹಾಗೂ ಪುರುಷೋತ್ತಮ ಎಂಬುವವರು ಅಧಿಕಾರಿಗಳ ಒತ್ತಡಕ್ಕೆ ಮಣಿದು ನಿನ್ನೆ ಕರ್ತವ್ಯಕ್ಕೆ ಹಾಜರಾಗಿ ಚಿಕ್ಕಬಳ್ಳಾಪುರದಿಂದ ಬಾಗೇಪಲ್ಲಿವರೆಗೂ ಹಾಗೂ ಚಿಂತಾಮಣಿಯಿಂದ ಶ್ರೀನಿವಾಸಪುರ ಕಡೆಗೆ ಬಸ್ ಚಲಾಯಿಸಿದ್ದರು. ಹೀಗಾಗಿ, ಸಹೋದ್ಯೋಗಿಗಳು ರಾತ್ರೋರಾತ್ರಿ ಅವರ ಭಾವಚಿತ್ರಗಳಿಗೆ ಶ್ರದ್ಧಾಂಜಲಿ ಅರ್ಪಿಸಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ.

ಓದಿ:ಹಿರಿಯ ಪೊಲೀಸ್ ಅಧಿಕಾರಿಗಳ ಜೊತೆ ಸಿಎಂ ಸಭೆ: ನೈಟ್ ಕರ್ಫ್ಯೂ ಸನ್ನದ್ಧತೆಗೆ ಸೂಚನೆ

For All Latest Updates

TAGGED:

ABOUT THE AUTHOR

...view details