ಚಿಕ್ಕಬಳ್ಳಾಪುರ : ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಕಾಂಗ್ರೆಸ್ ಸೇರ್ಪಡೆ ವಿಚಾರಕ್ಕೆ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಬೇಸರ ವ್ಯಕ್ತಪಡಿಸಿದರು. ಚಿಕ್ಕಬಳ್ಳಾಪುರದಲ್ಲಿಂದು ನಾಮಪತ್ರ ಸಲ್ಲಿಕೆ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಜಗದೀಶ್ ಶೆಟ್ಟರ್ ಪಕ್ಷ ಬಿಟ್ಟಿದ್ದು ದುರದೃಷ್ಟಕರ ವಿಚಾರ. ಇದೊಂದು ರೀತಿ ರಾಜಕೀಯ ಆತ್ಮಹತ್ಯೆ ಎಂದು ಹೇಳಿದರು.
ಜಗದೀಶ್ ಶೆಟ್ಟರ್ ಕಾಂಗ್ರೆಸ್ ಆಶಯಗಳಿಗೆ ವಿರುದ್ಧವಾಗಿ ಗೆದ್ದಿದ್ದವರು. ಹೈಕಮಾಂಡ್ ಅವರಿಗೆ ಪಕ್ಷ ಹಾಗೂ ದೇಶ ಸೇವೆಗೆ ಅವಕಾಶ ನೀಡೋದಾಗಿ ಹೇಳಿತ್ತು. ಶಾಸಕರಾಗಿ ಹಲವು ಬಾರಿ ಗೆದ್ದು ಸಚಿವರಾಗಿ, ಮುಖ್ಯಮಂತ್ರಿಗಳಾಗಿದ್ದರು. ಶಾಸಕರಿಂದ ಸಿಎಂವರೆಗೆ ಸಾಕಷ್ಟು ಹುದ್ದೆಗಳನ್ನು ಪಡೆದು ಪಕ್ಷ ಬಿಟ್ಟಿದ್ದು ಸರಿಯಲ್ಲ ಎಂದರು.