ಚಿಕ್ಕಬಳ್ಳಾಪುರ:ಯಾವ ನಿಯಮಗಳ ಅಡಿಯಲ್ಲಿ ಎಲೆಕ್ಷನ್ ಕಮಿಷನರ್ ಬಿಬಿಎಂಪಿಯವರಿಗೆ ಹೇಳಿದ್ದಾರೋ ಅದೇ ನಿಟ್ಟಿನಲ್ಲಿ ಬಿಬಿಎಂಪಿ ಗುತ್ತಿಗೆ ಸಂಸ್ಥೆಗೆ ಆದೇಶ ಕೊಟ್ಟಿದ್ದಾರೆ. ಗುತ್ತಿಗೆ ಸಂಸ್ಥೆ ಆ ನಿಯಮಗಳನ್ನು ಮೀರಿ ನಡೆದರೆ ಕಾನೂನು ಕ್ರಮ ಆಗುತ್ತದೆ. ಅದು ಬಿಟ್ಟು ಗುತ್ತಿಗೆದಾರರು ತಪ್ಪು ಮಾಡಿದರೆ ಬಿಬಿಎಂಪಿ ಕಮಿಷನರ್‌ಗೆ ಹೇಗೆ ಶಿಕ್ಷೆ ಆಗುತ್ತೆ? ಇದೊಂದು ಸಣ್ಣ ಕಾಮನ್ ಸೆನ್ಸ್, ಅದೂ ಕೂಡ ಕಾಂಗ್ರೆಸ್ನವರಿಗೆ ಇಲ್ವಾ ಎಂದು ಆರೋಗ್ಯ ಸಚಿವ ಡಾ.ಸುಧಾಕರ್ ಪ್ರತಿಕ್ರಿಯಿಸಿದರು.
ನಗರದ ತಾಲೂಕು ಆವರಣ ಕಚೇರಿಯಲ್ಲಿ ಆಯೋಜಿಸಿದ್ದ ಜನಾತಾ ದರ್ಶನ ಕಾರ್ಯಕ್ರಮದಲ್ಲಿ ಓಟರ್ ಐಡಿ ಹಗರಣಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಕಾನೂನಿನ ಹೋರಾಟ ಮಾಡುವುದಕ್ಕೆ ಸರ್ವರು ಸ್ವತಂತ್ರರು. ಆದರೆ 2013 ರಲ್ಲಿ ಹಾಗೂ 2014 ರಲ್ಲಿಯೂ ಬಿಬಿಎಂಪಿ ಎನ್ಜಿಓಗೆ ಕೊಟ್ಟಿದ್ದಾರೆ. ಆಗ ಆಡಳಿತದಲ್ಲಿದ್ದವರು ಯಾರು? ಯಾಕೆ ವಿರೋಧ ಮಾಡಿಲ್ಲ? ನಾವು ಬಂದ ಮೇಲೆ ಹೊಸದಾಗಿ ಗುತ್ತಿಗೆ ನೀಡಿರುವುದಲ್ಲ. ಕಾಂಗ್ರೆಸ್ ಅವಧಿಯಲ್ಲೂ ಬಿಬಿಎಂಪಿ ಗುತ್ತಿಗೆಯನ್ನು ಕೊಟ್ಟಿದ್ದಾರೆ. ಬಿಬಿಎಂಪಿ ಅವರು ಒಂದು ನಿರ್ಧಿಷ್ಟ ಕಾರಣಕ್ಕಾಗಿ ಒಂದು ಸಂಸ್ಥೆಗೆ ಗುತ್ತಿಗೆ ನೀಡಿರುತ್ತಾರೆ. ಒಂದು ವೇಳೆ ಅದನ್ನು ಮೀರಿ ಸಂಸ್ಥೆ ನಡೆದುಕೊಮಡರೆ, ಸಂಸ್ಥೆಯ ಮೇಲೆ ಕಾನೂನು ರೀತಿಯ ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ಹೇಳಿದರು.