ಚಿಕ್ಕಬಳ್ಳಾಪುರ:ಕಡ್ಡಾಯ ಮತದಾನದ ಜೊತೆ ನೈತಿಕ ಮತದಾನವನ್ನು ಮಾಡಬೇಕೆಂದು ಚಿಕ್ಕಬಳ್ಳಾಪುರ ಸಿಇಓ ಫೌಜೀಯಾ ತರುನಮ್ ಮತದಾನ ಜಾಗೃತಿ ವೇಳೆ ಮತದಾರಿಗೆ ಮನವಿ ಮಾಡಿದ್ದಾರೆ.
ಕಡ್ಡಾಯ ಮತದಾನವಲ್ಲಾ, ನೈತಿಕ ಮತದಾನವನ್ನು ನಡೆಸಬೇಕು: ಸಿಇಓ ಫೌಜಿಯಾ ತರುನಮ್ ಸ್ವೀಪ್ ಸಮಿತಿಯಿಂದ ಮತದಾನದ ಜಾಗೃತಿಯನ್ನು ಹಮ್ಮಿಕೊಂಡಿದ್ದು, ಕ್ಯಾಂಡಲ್‌ನ ಲೈಟ್ ಮಾರ್ಚ್ ಮಾಡುವುದರ ಮೂಲಕ ಮತದಾನದ ಜಾಗೃತಿ ಮಾಡಲಾಯಿತು.
ಮತದಾನದ ಬಗ್ಗೆ ಅರಿವು ಮೂಡಿಸಲು ಸಾಕಷ್ಟು ಯೋಜನೆಗಳನ್ನು ಮಾಡಲಾಗಿದೆ. ಶಾಲೆ, ಕಾಲೇಜು ಸೇರಿದಂತೆ ಗ್ರಾಮಪಂಚಾಯತಿ, ಹೋಬಳಿ ಮಟ್ಟದಲ್ಲಿ ಅರಿವು ಮೂಡಿಸಲಾಗುತ್ತಿದೆ. ಸದ್ಯ ಇಂದು ಕ್ಯಾಂಡಲ್ ಲೈಟ್ ಮಾರ್ಚ್ನ್ನು ತಾಲೂಕು ಪಂಚಾಯತಿಯಿಂದ ಜೂನಿಯರ್ ಕಾಲೇಜಿನವರೆಗೂ ಮಾರ್ಚ್ ಮಾಡಿ ನಂತರ ಪ್ರತಿಜ್ಞೆ ಮಾಡಲಾಯಿತು.
ಕ್ಯಾಂಡೆಲ್ ಮಾರ್ಚ್‌ನ ಮುಖ್ಯ ಉದ್ದೇಶ ಮತದಾನದ ಬಗ್ಗೆ ತಿಳಿಯಲು ಹಾಗೂ ಮತದಾರರ ಸಂಖ್ಯೆ ಹೆಚ್ಚಿಸುವ ಸಲುವಾಗಿ ಅರಿವು ಮೂಡಿಸಲು. ಈ ಯೋಜನೆಗಳು ನೈತಿಕವಾಗಿ ಮತ ಹಾಕಲು ಜನರಿಗೆ ಪ್ರೇರಣೆಯಾಗಲಿದೆ. ಉತ್ತಮ ಜನನಾಯಕರನ್ನು ಆಲೋಚನೆ ಮಾಡಿ ಆಯ್ಕೆ ಮಾಡಲು ಮತದಾರಿಗೆ ಸಿಇಓ ಸಂದೇಶ ನೀಡಿದ್ದಾರೆ.