ಕರ್ನಾಟಕ

karnataka

ETV Bharat / state

ಗೌರಿಬಿದನೂರಿನಲ್ಲಿ ಹಂದಿ, ಬೀದಿನಾಯಿಗಳ ಕಾಟ... ಬೇಸತ್ತ ಸಾರ್ವಜನಿಕರು! - ಚಿಕ್ಕಬಳ್ಳಾಪುರದಲ್ಲಿ ನಾಯಿ ಕಾಟ ಸುದ್ದಿ

ಚಿಕ್ಕಬಳ್ಳಾಪುರ ಜಿಲ್ಲೆ ಗೌರಿಬಿದನೂರು ತಾಲೂಕಿನಲ್ಲಿ ಹಂದಿ ಹಾಗೂ ಬೀದಿನಾಯಿಗಳ ಹಾವಳಿ ಹೆಚ್ಚಾಗಿದ್ದು, ಜನ ಜೀವ ಭಯದಲ್ಲಿ ಓಡಾಡುವಂತಹ ಸ್ಥಿತಿ ನಿರ್ಮಾಣಗೊಂಡಿದೆ.

dogs-problem-in-gowribidanuru
ಬೀದಿನಾಯಿಗಳ ಕಾಟ

By

Published : Jan 25, 2020, 5:15 AM IST

ಚಿಕ್ಕಬಳ್ಳಾಪುರ:ಬೀದಿನಾಯಿಗಳ ಕಾಟಕ್ಕೆ ಬೇಸತ್ತು ಜನ ಮನೆಯಿಂದ ಹೊರಗೆ ಬರಲು ಭಯಪಡುತ್ತಿರುವ ಘಟನೆ ಜಿಲ್ಲೆಯ ಚಿಕ್ಕಬಳ್ಳಾಪುರ ಗೌರಿಬಿದನೂರಿನಲ್ಲಿ ನಿರ್ಮಾಣವಾಗಿದೆ.

ಬೀದಿನಾಯಿಗಳ ಕಾಟ

ಇತ್ತೀಚೆಗೆ ನಗರದಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದ್ದು, ಅಧಿಕ ಜನಸಂಚಾರ ನಡೆಸುವ ಪ್ರದೇಶಗಳಾದ ಬಜಾರ್ ರಸ್ತೆಯಲ್ಲಿಯೇ ಸುಮಾರು ಹದಿನೈದಕ್ಕೂ ಹೆಚ್ಚು ಬೀದಿನಾಯಿಗಳು ರಾಜಾರೋಷವಾಗಿ ಓಡಾಡುತ್ತಿದ್ದು, ಸಾರ್ವಜನಿಕರು ಜೀವ ಭಯದಲ್ಲೇ ಓಡಾಡುವಂತಹ ಸ್ಥಿತಿ ನಿರ್ಮಾಣಗೊಂಡಿದೆ.

ಸದ್ಯ ನಗರದಲ್ಲಿ ನಾಯಿಗಳ ಕಾಟಕ್ಕೆ ಸಾರ್ವಜನಿಕರು ಸುಸ್ತಾಗಿದ್ದರೆ ಹಲವು ಬಡಾವಣೆಗಳಲ್ಲಿ ಹಂದಿ ಹಾವಳಿಗೆ ನಗರದ ಜನತೆ ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಜಿಲ್ಲೆಯಲ್ಲಿ ನಾಯಿಗಳ ದಾಳಿಯಿಂದ ಸಾಕಷ್ಟು ಜನ ಗಾಯಗೊಂಡು ಆಸ್ಪತ್ರೆ ಸೇರಿರುವ ಘಟನೆಗಳು ನಡೆದಿವೆ. ಅಂತಹ ಘಟನೆಗಳು ಮರುಕಳುಹಿಸುವುದಕ್ಕೂ ಮುಂಚೆಯೇ ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನಹರಿಸಿ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ABOUT THE AUTHOR

...view details